ವಾದ್ರಾ ಭೂ ಅವ್ಯವಹಾರ: ಹೊಸ ತನಿಖೆಗೆ ಆದೇಶ

ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ವಾದ್ರಾ ತಮ್ಮ ಒಡೆತನದ...
ರಾಬರ್ಟ್‌ವಾದ್ರಾ
ರಾಬರ್ಟ್‌ವಾದ್ರಾ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ವಾದ್ರಾ ತಮ್ಮ ಒಡೆತನದ ಡಿಎಲ್‌ಎಫ್‌ರಿಯಲ್ ಎಸ್ಟೇಟ್ ಸಂಸ್ಥೆ ಮೂಲಕ ನಡೆಸಿರುವ ಭೂ ಅವ್ಯವಹಾರ ಪ್ರಕರಣವನ್ನು ಹರಿಯಾಣ ಸರ್ಕಾರ ಮರು ತನಿಖೆಗೆ ಆದೇಶ ನೀಡಿದೆ.

ಈ ಮೂಲಕ ರಾಬರ್ಟ್ ವಾದ್ರಾ ಮತ್ತು ಪ್ರಿಯಾಂಕಾ ಗಾಂಧಿಗೆ ಮತ್ತೆ ಸಂಕಷ್ಟ ಎದುರಾದಂತಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರು ಭೂ ಅವ್ಯವಹಾರ ಪ್ರಕರಣದ ಹೊಸ ತನಿಖೆಗೆ ಆದೇಶ ಮಾಡಿದ್ದಾರೆ.

ಹಿಂದಿನ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಅವರು ಕಾನೂನು ಬಾಹಿರವಾಗಿ ಗುರ್‌ಗಾಂವ್ ಬಳಿ 350 ಎಕರೆಯನ್ನು ವಾದ್ರಾ ಅವರಿಗೆ ಮಂಜೂರು ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಬಿಜೆಪಿ ನೂತನ ಸರ್ಕಾರ ವಾದ್ರಾ ವಿರುದ್ಧ ಹೊಸ ತನಿಖೆಗೆ ಆದೇಶ ಮಾಡಿದೆ. ಭ್ರಷ್ಟಾಚಾರವನ್ನು ಮತ್ತು ಅವ್ಯವಹಾರಗಳನ್ನು ಹತ್ತಿಕ್ಕುವ ಕೆಲಸ ನಮ್ಮ ಸರ್ಕಾರ ಗುರಿಯಾಗಿದೆ. ಜನತೆಗೆ ನ್ಯಾಯಾ ಒದಗಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com