ತಿರುಪತಿ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ

2014ರಲ್ಲಿ ರೂ.832 ಕೋಟಿ ಸಂಗ್ರಹ
ತಿರುಪತಿ ಪುಣ್ಯ ಕ್ಷೇತ್ರ
ತಿರುಪತಿ ಪುಣ್ಯ ಕ್ಷೇತ್ರ

ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ತಿರುಪತಿ ಇದೀಗ ಮತ್ತೊಂದು ಹೊಸ ದಾಖಲೆ ಮಾಡಿದೆ. 2014ರಲ್ಲಿ ಭಕ್ತರು ಹುಂಡಿ ಹಾಕಿರುವ ಹಾಗೂ ದಾನ ಮಾಡಿರುವ ಮೊತ್ತ ರೂ.832 ಕೋಟಿ ಸಂಗ್ರಹವಾಗಿದ್ದು, ವಿಶ್ವದ ಅತ್ಯಂತ ಶ್ರೀಮಂತ ಪುಣ್ಯ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2014ರಲ್ಲಿ ಸುಮಾರು 2.26 ಕೋಟಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ, 2014ರಲ್ಲಿ ಸುಮಾರು 8.98 ಕೋಟಿ ಲಡ್ಡುಗಳನ್ನು ಪ್ರಸಾದವಾಗಿ ಭಕ್ತಿರಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದೆ.

2014ರಲ್ಲಿ ಸುಮಾರು 1.15 ಮಂದಿ ಭಕ್ತರು ತಿಮ್ಮಪ್ಪನ ದೇವಾಲಯಕ್ಕೆ ಮುಡಿ ಕೊಟ್ಟಿದ್ದಾರೆ. ಸುಮಾರು 1.87 ಲಕ್ಷಮಂದಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿದೆ.

ಮುಂದಿನ ವರ್ಷಕ್ಕೆ ಅಂದರೆ 2015ರಲ್ಲಿ ಹುಂಡಿ ಹಣ ಮಾತ್ರ 900 ಕೋಟಿ ರೂಪಾಯಿ ದಾಡುವ ನಿರೀಕ್ಷೆಯಿದೆ ಎಂದು ತಿರುಪತಿ ಆಡಳಿತ ಮಂಡಳಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com