ಭಾರತರತ್ನ ನೆಲೆವೀಡು ವಾರಣಾಸಿ ದಾಖಲೆ
ವಾರಣಾಸಿ: ವಾರಣಾಸಿ ದೇಗುಲಗಳ ನಗರವಷ್ಟೇ ಅಲ್ಲ. 'ಭಾರತ ರತ್ನ'ರ ನಗರವೂ ಹೌದು. ಶಿಕ್ಷಣ ತಜ್ಞ ಪಂಡಿತ್ ಮದನ್ ಮೋಹನ್ ಮಾಳವೀಯಗೆ ಭಾರತ ರತ್ನ ಘೋಷಣೆಯಾಗುತ್ತಿದ್ದಂತೆ ದೇಶದ ಅತ್ಯಂತ ಹಳೆದ ನಗರಗಳಲ್ಲೊಂದಾಗದ ವಾರಣಾಸಿ ಹೊಸ ದಾಖಲೆಯೊಂದನ್ನು ಬರೆಯಿತು.
ಈ ರೀತಿ ದೇಶದ ಅತ್ಯುನ್ನತ ಗೌರವ ಪಡೆದ ಐದು ಸಾಧಕರನ್ನು ಹೊಂದಿದ ನಗರ ಎನ್ನುವ ಹೆಗ್ಗಳಿಕೆಗೆ ವಾರಣಾಸಿ ಪಾತ್ರವಾಗಿದೆ.
1955ರಲ್ಲಿ ಶಿಕ್ಷಣತಜ್ಞ, ಕಾಶಿ ವಿದ್ಯಾಪೀಠದ ಸಂಸ್ಥಾಪಕ ಡಾ.ಭಗವಾನ್ ದಾಸ್‌ರಿಗೆ ಭಾರತ ರತ್ನ ಸಿಕ್ಕಿತ್ತು. ದಾಸ್, ಮಾಳವೀಯ ಜತೆ ಸೇರಿ ಬನಾರಸ್ ಹಿಂದೂ ವಿವಿ ಸ್ಥಾಪಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು.
ಆ ಬಳಿಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ(1966), ಪ್ರಸಿದ್ದ ಸಿತಾರ್ ವಾದಕ ಪಂಡಿತ್ ರವಿಶಂಕರ್(1999) ಅವರಿಗೆ ಈ ಗೌರವ ಸಿಕ್ಕಿತ್ತು. ಎರಡು ವರ್ಷಗಳ ಬಳಿಕ 2001ರಲ್ಲಿ ಖ್ಯಾತ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್‌ರನ್ನು ಈ ಗೌರವ ಹುಡುಕಿಕೊಂಡು ಬಂದಿತ್ತು. ಖಾನ್ ಅವರು ಮೂಲತಃ ವಾರಣಾಸಿಯವರಲ್ಲ.
ಹಾಗಿದ್ದರೂ ಅವರು ಇದೇ ನಗರದಲ್ಲಿ ವಾಸಿಸುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ