
ಪುಣೆ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಮಾಡುವ ಅಗತ್ಯವಿದ್ದು, ಬ್ಯಾಂಕುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಅಗತ್ಯವಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಎರಡು ದಿನಗಳ ಬ್ಯಾಂಕಿಂಗ್ ಸಮಾವೇಶದಲ್ಲಿ ಮಾತನಾಡಿದ ಜೇಟ್ಲಿ, ಬ್ಯಾಂಕುಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡುವ ಅಗತ್ಯವಿದ್ದು, ಕೆಲವು ಪ್ರಕರಣಗಳಲ್ಲಿ ಕಾರ್ಯನಿರ್ವಹಿಸದ ಸಾಲಗಳು ಅಸ್ವೀಕಾರಾರ್ಹ. ಬ್ಯಾಂಕಿಂಗ್ ವ್ಯವಸ್ಥೆಗೆ ಅತ್ಯುತ್ತಮ ಪ್ರತಿಭಾಶಾಲಿಗಳನ್ನು ತರುವ ಅಗತ್ಯವಿದೆ ಎಂದರು.
ಭಾರತದ ಬ್ಯಾಂಕ್‌ಗಳು ಅತ್ಯಧಿಕ ಶೇ. 1.29ರಷ್ಟು ವಸೂಲಿಯಾಗದ ಸಾಲವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಾಖಲಿಸಿದೆ. ಆದರೆ ಖಾಸಗಿ ಬ್ಯಾಂಕ್‌ಗಳಲ್ಲಿ ಸುಸ್ತಿ ಸಾಲ ಶೇ. 4.4. ಎಂದು ಕೇಂದ್ರೀಯ ಬ್ಯಾಂಕ್ ದತ್ತಾಂಶ ತಿಳಿಸಿದೆ.
Advertisement