
ಇಸ್ಲಾಮಾಬಾದ್: ಉತ್ತರ ವಜೀರಿಸ್ತಾನದಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ತೆಹ್ರಿಕ್-ಎ-ತಾಲಿಬಾನ್ ಸಂಘಟನೆಯ ಪ್ರಮುಖ ನಾಯಕ ಹಫೀಜ್ ಗುಲ್ ಬಹಾದಾರ್ ಅಸುನೀಗಿದ್ದಾನೆ.
ಆಫ್ಘಾನಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶಧಲ್ಲಿ ಪೈಲಟ್ ರಹಿತ ಡ್ರೋಣ್ ವಿಮಾನ ಮೂಲಕ ಈ ದಾಳಿ ನಡೆಸಲಾಗಿದೆ. ಗುಲ್ ಸೇರಿದಂತೆ ಒಟ್ಟು 10 ಮಂದಿ ಉಗ್ರರನ್ನು ಕೊಲ್ಲಲಾಗಿದೆ.
ಪ್ರಸಕ್ತ ವರ್ಷದಲ್ಲಿ ಉತ್ತರ ವಜೀರಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಕಾರ್ಯಾಚರಣೆ ನಡೆಸಿದೆ. ಉತ್ತರ ವಜೀರಿಸ್ತಾನವು ತಾಲಿಬಾನ್ ಹಾಗೂ ಅಲ್‌ಖೈದಾ ಉಗ್ರರ ನೆಲೆವೀಡಾಗಿದ್ದು, ಆಗಾಗ್ಗೆ ಅಮೆರಿಕದ ಡ್ರೋಣ್ ದಾಳಿಗೆ ಗುರಿಯಾಗುತ್ತಲೇ ಇದೆ.
ಇದೇ ಪ್ರದೇಶದಲ್ಲಿ ಪಾಕ್ ಸೇನೆ ಕೂಡ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಇಲ್ಲಿನ ಈಗಲೂ ಆಡಗುತಾಣವಾಗಿ ಬಳಸುತ್ತಿದ್ದು, ಕಳೆದ ವರ್ಷದ ಜೂನ್‌ನಿಂದ ನಡೆದ ಕಾರ್ಯಾಚರಣೆಯಲ್ಲಿ 1,500ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ.
Advertisement