ರೈಲು ಹತ್ತಿದರೆ ಮನೆ ಸೇರೋದು ಸುಲಭ

ರೈಲು ನಿಲ್ಧಾಣದಲ್ಲಿ ಇಳಿಯುತ್ತಿದ್ದಂತೆ ಯಾರಾದರೂ ನಮ್ಮನ್ನು ಸ್ವಾಗತಿಸಿ...
ರೈಲು ಹತ್ತಿದರೆ ಮನೆ ಸೇರೋದು ಸುಲಭ
Updated on

ನವದೆಹಲಿ: ರೈಲು ನಿಲ್ಧಾಣದಲ್ಲಿ ಇಳಿಯುತ್ತಿದ್ದಂತೆ ಯಾರಾದರೂ ನಮ್ಮನ್ನು ಸ್ವಾಗತಿಸಿ, ನಮ್ಮ ಲಗೇಜ್‌ಗಳನ್ನು ಹೊತ್ತು, ಸುರಕ್ಷಿತವಾಗಿ ಕ್ಯಾಬ್‌ಗಳಲ್ಲಿ ನಮ್ಮನ್ನು ಮನೆ ತಲುಪಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೆಚ್ಚಿನವರು ಭಾವಿಸುವುದುಂಟು.

ಈ ಕಲ್ಪನೆ ಸದ್ಯದಲ್ಲೇ ಸಾಕಾರಗೊಳ್ಳಲಿದೆ. ಈ ಎಲ್ಲ ಸೇವೆಗಳನ್ನು ಒದಗಿಸುವ ಪ್ಯಾಕೇಜ್ ಅನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಟಿಕೆಟ್-ಬುಕಿಂಗ್ ವೆಬ್‌ಸೈಟ್‌ನಲ್ಲಿ ಇಂತಹ ಸೇವೆ ಕಲ್ಪಿಸಲಾಗುತ್ತದೆ. ಈ ಹೊಸ ಯೋಜನೆಗೆ ಸಚಿವ ಸುರೇಶ್ ಪ್ರಭು ಅವರು ಕಳೆದ ತಿಂಗಳೇ ಹಸಿರು ನಿಶಾನೆ ತೋರಿದ್ದಾರೆ.

ಈ ಯೋಜನೆಯು ಮೊದಲಿಗೆ ನವದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಈ ಬಗ್ಗೆ ಶೀಗ್ರದಲ್ಲೇ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಐಆರ್‌ಸಿಟಿಸಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಕೆ ಮನೋಚಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com