ಬರಾಕ್ ಒಬಾಮ ಭಾರತಕ್ಕೆ ಬರುವಾಗ

ಗುಂಡು ನಿರೋಧಕ ಕಾರ್ ಮತ್ತು...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ಚೊಚ್ಚಲ ಭೇಟಿ
2010ರ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತವರ ತಂಡ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾಗ ಬಳಸಲಾದ ವಿಮಾನಗಳು
* ಏರ್‌ಫೋರ್ಸ್ ಒನ್ ಸೇರಿದಂತೆ ಒಟ್ಟು 40 ವಿಮಾನಗಳು
* ಗುಂಡು ನಿರೋಧಕ ಕಾರ್ ಮತ್ತು ಚಾಪರ್‌ಗಳನ್ನು ಹೊತ್ತಯ್ದ ವಿಮಾನಗಳು

ಒಬಾಮಗಿಂತ ಮುನ್ನ ಬಂತು ಅವರ ವಿಮಾನ
ಮುಂಬೈ, ದೆಹಲಿ ಮತ್ತು ಆಗ್ರಾಕ್ಕೆ ಭೇಟಿ ನೀಡುವಾಗ ಓಡಾಡಲು ಒಬಾಮ ಅವರ ವಾಹನಗಳು ಮುಂಚಿತವಾಗಿಯೇ ತರಿಸಲಾಗಿದ್ದವು!
* 13 ವಿಮಾನಗಳು
* 3 ಚಾಪರ್‌ಗಳು
* 40 ದುಬಾರಿ ಕಾರ್‌ಗಳು

ಭಾರತದಲ್ಲಿ ಸಜ್ಜಾದ ವಿಮಾನ
ತುರ್ತು ಪರಿಸ್ಥಿತಿಯಲ್ಲಿ ಒಬಾಮ ಮತ್ತವರ ಕಟುಂಬವನ್ನು ಸುರಕ್ಷಿತವಾಗಿ ಭಾರತದಿಂದ ಅಮೆರಿಕಕ್ಕೆ ಕೊಂಡೊಯ್ಯಲು
* 3 ಮರೀನ್ ಒನ್ ಚಾಪರ್‌ಗಳು

ಪ್ರೀ-ಅಡ್ವಾನ್ಸ್ ತಂಡ
ಅಮೆರಿಕದ ಗೂಢಾಚಾರ ಸೇವಾವರ್ಗ ಕಳೆದ ತಿಂಗಳು ಭಾರತಕ್ಕೆ ಬಂದು ಆಗ್ರಾದ ತಾಜ್‌ಮಹಲ್ ಸಂಕೀರ್ಣ ಮತ್ತು ದೆಹಲಿಯ ಇತರೆ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿತ್ತು.

ಅಡ್ವಾನ್ಸ್ ತಂಡ
ಜ.12ರಂದು ದೆಹಲಿಗೆ ಬರಲಿದೆ
ನಂತರ ಇನ್ನೂ ದೊಡ್ಡ ಗೂಡಾಚಾರ ಸೇವಾವರ್ಗ ಬಂದು ಭಾರತದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಿದೆ.

ಒಬಾಮ ಕಾರಿನ ವೈಶಿಷ್ಟ್ಯ
* ಕಪ್ಪು ಬಣ್ಣದ ಕ್ಯಾಡಿಲ್ಯಾಕ್ ಅನ್ನು 'ಬರಾಕ್ ಮೊಬೀಲ್‌' ಎನ್ನಲಾಗುತ್ತದೆ.
* ಅಮೆರಿಕದ ಶ್ವೇತಭವನ, ಉಪಾಧ್ಯಕ್ಷ ಮತ್ತು ಸ್ಟ್ರಾಟಜಿಕ್ ಕಮಾಂಡ್ ಜತೆ        ಸಂಪರ್ಕದಲ್ಲಿರಲು ವ್ಯವಸ್ಥೆ
* ಅಮೆರಿಕದ ಅಣುಬಾಂಬ್ ಲಾಂಚ್ ಕೋಡ್‌ಗಳು
* ನ್ಯೂಕ್ಲಿಯರ್ ಸ್ವಿಚ್‌ಗಳು
* ರಾಸಾಯನಿಕ ಅಥವಾ ರೋಗಾಣು ಯುದ್ಧ ಮತ್ತು ಬಾಂಬ್ ದಾಳಿ ತಡೆಯಬಲ್ಲ ಸಾಮಾರ್ಥ್ಯ
* ಒಬಾಮ ತಂಗಲಿರುವ ಹೋಟೆಲ್ ಮೌರ್ಯ ಶೆರಟಾನ್‌ನ ಮಹಡಿಯನ್ನು ನಿರ್ಮಲಗೊಳಿಸಲಿದೆ

ಏರ್‌ಫೋರ್ಸ್ ಒನ್
* ಅಮೆರಿಕ ಅಧ್ಯಕ್ಷ ಬಳಸುವ ವಿಮಾನವಿದು
* ಬೊಯಿಂಗ್ 747-200ಬಿ ಶ್ರೇಣಿಯ ಈ ವಿಮಾನವನ್ನು ಬೇಡಿಕೆ ತಕ್ಕಂತೆ ಒಗ್ಗಿಸಿ ಎರ್‌ಫೋರ್ಸ್ ಒನ್ ಎಂದು ಪರಿವರ್ತಿಸಲಾಗಿದೆ.
* ಇಂಥಾ 2 ವಿಮಾನಗಳನ್ನು ಅಧ್ಯಕ್ಷರಿಗೆಂದೇ ತಯಾರಿಸಲಾಗಿದೆ.
* ವಿಮಾನ ಹಾರಾಟದ ವೆಚ್ಚ ಗಂಟೆಗೆ ರೂ.63,37,495!
* ಒಟ್ಟು 3 ಮಹಡಿಗಳು
* ಪ್ರತಿ ಮಹಡಿಯ ವಿಸ್ತಾರ 4,000 ಚದರ
* ಅಧ್ಯಕ್ಷರಿಗೆಂದೇ ಪ್ರತ್ಯೇಕ ಮಹಡಿಯಿದೆ.
* ವಿಮಾನದಲ್ಲಿ ಒಬ್ಬ ವೈದ್ಯ ಸದಾ ಕಾಲ ಇದ್ದೇ ಇರುತ್ತಾರೆ.
* ಶಸ್ತ್ರಚಿಕಿತ್ಸೆ ನಡೆಸುವ ಕೊಠಡಿ ಸೇರಿದಂತೆ ವೈದ್ಯಕೀಯ ತಪಾಸಣೆ ಕೋಣೆಯೂ ಇದೆ
ಸಂಚಾರದ ಮಧ್ಯೆ ಇಂಧನ ತುಂಬಿಸುವಿಕೆಯ ಸಾಮಾರ್ಥ್ಯವಿರುವುದರಿಂದ ಹಾರಾಟದ ವ್ಯಾಪ್ತಿ ಅಪರಿಮಿತವಾಗಿದೆ.
* ವಿಮಾನದಲ್ಲಿನ 2 ಅಡುಗೆ ಮನೆ, ಒಂದೇ ಬಾರಿ 100 ಮಂದಿಗೆ ಬೇಕಾದಷ್ಟು ಅಡುಗೆ ತಯಾರಿಸುವಷ್ಟು ಜಾಗ ಮತ್ತು ಸೌಕರ್ಯ ಹೊಂದಿದೆ.
* ಒಂದು ವೇಳೆ ಅಮೆರಿಕದ ಮೇಲೆ ದಾಳಿ ನಡೆದಲ್ಲಿ ಈ ವಿಮಾನಕ್ಕೆ ಕೂಡಲೇ ಮಾಹಿತಿ ಬಂದು ತಲುಪುತ್ತದೆ.
* ವಿಮಾನದಲ್ಲೇ ಕುಳಿತು ದಾಳಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಅಧ್ಯಕ್ಷರು ಸಂದೇಶ ಮತ್ತು ಆದೇಶ ಹೊರಡಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com