ವಾಸಿಸಲು ಯೋಗ್ಯವಾದ 8 ಹೊಸ ಗ್ರಹಗಳ ಪತ್ತೆ ಹಚ್ಚಿದ ನಾಸಾ!

ಮನುಷ್ಯರು ವಾಸಿಸಲು ಯೋಗ್ಯವಾಗಿರುವ...
ವಾಸಿಸಲು ಯೋಗ್ಯವಾದ 8 ಹೊಸ ಗ್ರಹಗಳ ಪತ್ತೆ ಹಚ್ಚಿದ ನಾಸಾ!

ವಾಷಿಂಗ್ಟನ್: ಮನುಷ್ಯರು ವಾಸಿಸಲು ಯೋಗ್ಯವಾಗಿರುವ ಜತೆಗೆ ಭೂಮಿಯನ್ನೇ ಹೋಲುವ 8 ಗ್ರಹಗಳನ್ನು ಪತ್ತೆ ಮಾಡಿರುವುದಾಗಿ ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.
 
ಈ ಸಂಬಂಧ ಮಾಹಿತಿ ನೀಡಿರುವ ಅಮೆರಿಕ ಖಗೋಳ ಶಾಸ್ತ್ರಜ್ಞರು, ಇದೀಗ ಪತ್ತೆ ಹಚ್ಚಿರುವ 8 ಗ್ರಹಗಳ ಪೈಕಿ ಎರಡರಲ್ಲಿ ನೀರಿದ್ದು, ಇವು ಭೂಮಿಯನ್ನೇ ಹೋಲುತ್ತಿದ್ದು ಮನುಷ್ಯರು ವಾಸಿಸಲು ಅಲ್ಲಿ ಪೂರಕ ವಾತಾವರಣವಿದೆ ಎಂದು ತಿಳಿಸಿದ್ದಾರೆ.

ನಾಸಾದ ದುರದರ್ಶಕ ಕೆಪ್ಲರ್ ಇದನ್ನು ಖಚಿತಪಡಿಸಿದ್ದು ಭೂಮಿಯನ್ನು ಹೋಲುವ ಎರಡು ಗ್ರಹಗಳಿಗೆ ಕೆಪ್ಲರ್-438ಬಿ ಮತ್ತು ಕೆಪ್ಲರ್-442ಬಿ ಎಂದು ಹೆಸರಿಟ್ಟಿದೆ. ನಾವು ಇಷ್ಟು ದಿನ ಇಂಥಹದ್ದೇ ಗ್ರಹಗಳ ಹುಡುಕಾಟ ನಡೆಸುತ್ತಿದ್ದವು. 2009ರಿಂದಲೂ ಈ ಬಗ್ಗೆ ನಿರಂತರ ಯತ್ನ ನಡೆಯುತ್ತಾ ಬಂದಿದೆ. ಈಗ ನಮ್ಮ ಸಂಶೋಧನೆಗೆ ನೆರವಾಗುವ ಅಂಶಗಳು ದೊರೆತಿವೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಗ್ರಹದ ವಾತಾವರಣ, ಗಾಳಿ, ಬೆಳಕು ನೀರಿನ ಬಗ್ಗೆ ಸಂಶೊಧನೆ ನಡೆಯುತ್ತಿದೆ. ಕೆಪ್ಲರ್-438ಬಿ ಭೂಮಿಗಿಂತ ಶೇ. 40 ರಷ್ಟು ಹೆಚ್ಚು ಬೆಳಕನ್ನು ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ಪತ್ತೆಮಾಡಲಾಗಿದೆ ಎಂದು ಹಾವರ್ಡ್ ಸ್ಮಿತ್ ಸಾನಿಯನ್ ಖಗೋಳ ವಿಜ್ಞಾನಿ ಗಿಲೆರ್ವೊ ಟಾರ್ಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com