ನಿರೀಕ್ಷಿತ ಲಂಕೆ ಎಲೆಕ್ಷನ್ ಇಂದು

ಬಹು ನಿರೀಕ್ಷಿತ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಗುರುವಾರ ನಡೆಯುತ್ತಿದೆ.
ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಮತ್ತು ವಿಪಕ್ಷ ನಾಯಕ ಮೈತ್ರಿಪಾಲ ಸಿರಿಸೇನೆ (ಸಂಗ್ರಹ ಚಿತ್ರ)
ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಮತ್ತು ವಿಪಕ್ಷ ನಾಯಕ ಮೈತ್ರಿಪಾಲ ಸಿರಿಸೇನೆ (ಸಂಗ್ರಹ ಚಿತ್ರ)

ಕೊಲಂಬೋ: ಬಹು ನಿರೀಕ್ಷಿತ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಗುರುವಾರ ನಡೆಯುತ್ತಿದೆ.

ಹಾಲಿ ಅಧ್ಯಕ್ಷ, ಯುನೈಟೆಡ್ ಫ್ರೀಡಂ ಅಲಯನ್ಸ್‌ನ ಅಭ್ಯರ್ಥಿ ಮಹಿಂದ ರಾಜಪಕ್ಸೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನೇರುವ ಹೊಂಗನಸು ಕಾಣುತ್ತಿದ್ದರೆ, ಪ್ರತಿಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿ ನೇತೃತ್ವದ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಮೈತ್ರಿಪಾಲ ಸಿರಿಸೇನೆ ನಡುವೆ ನಿಕಟ ಪೈಪೋಟಿ ಇದೆ.

2009ರಲ್ಲಿ ಎಲ್‌ಟಿಟಿಇ ವಿರುದ್ಧ ಗೆದ್ದ ಮಹಿಂದ ರಾಜಪಕ್ಸೆ ಈ ಬಾರಿಯೂ ಗೆಲ್ಲುವುದು ಉತ್ತರ ವಣ್ಣಿ ಪ್ರದೇಶದಲ್ಲಿರುವ ದೇಶದ ಅಲ್ಪ ಸಂಖ್ಯಾತ ತಮಿಳರಿಗೆ ಇಷ್ಟವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತಮಿಳರ ಮೇಲೆ ದೌರ್ಜನ್ಯವೆಸಗಿದೆ ಆರೋಪ ರಾಜಪಕ್ಸೆ ಆಡಳಿತದ ಮೇಲಿದೆ. 21 ದಶಲಕ್ಷ ಜನಸಂಖ್ಯೆಯಲ್ಲಿ ಶೇ.70ರಷ್ಟು ಮಂದಿಯ ಮತಗಳು ಸಮಾನವಾಗಿ ರಾಜಪಕ್ಸೆ ಮತ್ತು ಸಿರಿಸೇನ ಅವರಲ್ಲಿ ಹಂಚಿಹೋಗಲಿದೆ. ಮಿಕ್ಕವರು ಈ ಅಲ್ಪಸಂಖ್ಯಾತ ತಮಿಳರು. ಆದ್ದರಿಂದ ಇವರ ಮತ ಚುನಾವಣೆಯ ಫಲಿತಾಂಶ ನಿರ್ಧರಿಸುವ ಅಂಶವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com