
ಘಾಜಿಯಾಬಾದ್: 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಘಾಜಿಯಾಬಾದ್ ನ ನೊಯಿಢಾ ಪ್ರದೇಶದಲ್ಲಿ ನಡೆದಿದೆ.
10ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆ ಮುಗಿದ ಬಳಿಕ ಟ್ಯೂಶೆನ್‌ಗೆ ಹೋಗುತ್ತಿದ್ದಳು. ಬಾಲಕಿಯನ್ನು ಪ್ರತಿನಿತ್ಯ ಗಮನಿಸುತ್ತಿದ್ದ ಹುಡುಗರ ಗುಂಪೊಂದು ನಿನ್ನೆ ಸಂಜೆ ಬಾಲಕಿ ಟ್ಯೂಶೆನ್‌ಗೆ ಹೋಗುವ ವೇಳೆ ಕಾರಿನಲ್ಲಿ ಬಂದು ಕರೆದೊಯ್ದಿದ್ದಾರೆ.
ಬಾಲಕಿಯನ್ನುನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಅತ್ಯಾಚಾರವೆಸಗಿದ ಪ್ರಜ್ಞೆ ತಪ್ಪಿದ್ದ ಬಾಲಕಿಯನ್ನು ಮತ್ತೆ ಕಾರಿನಲ್ಲಿ ತಂದು ಆಕೆಯ ಮನೆಯ ಹಿಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ.
ನಂತರ ಬಾಲಕಿ ನಡೆದ ಸಂಗತಿಯನ್ನು ಮನೆಯವರಲ್ಲಿ ಹೇಳಿದ್ದಾಳೆ. ಕುಟುಂಬಸ್ಥರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಅತ್ಯಾಚಾರ ನಡೆದಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಈಗಾಗಲೇ ಮೂವರು ಆರೋಪಿಗಳನ್ನು ಗುರ್ತಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement