ಅಧಿಕಾರಿಯ ಮುಂದೆ ಎದ್ದು ನಿಲ್ಲದ್ದಕ್ಕೆ ಜೈಲು ಶಿಕ್ಷೆ!

ಕರ್ತವ್ಯ ನಿರ್ವಹಿಸಲು ಅಡ್ಡಿ ಎಂಬ ಆರೋಪ...
15 ದಿನಗಳ ನ್ಯಾಯಾಂಗ ಬಂಧನ
15 ದಿನಗಳ ನ್ಯಾಯಾಂಗ ಬಂಧನ

ಚೆನ್ನೈ: ಮಾಹಿತಿ ಆಯುಕ್ತರ ಮುಂದೆ ಎದ್ದು ನಿಲ್ಲದ ಕಾರಣಕ್ಕಾಗಿ ಆರ್‌ಟಿಐ ಹೋರಾಟಗಾರರೊಬ್ಬರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಚೆನ್ನೈನಲ್ಲಿ ಗುರುವಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಎನ್‌ಜಿಒವೊಂದರ ಮುಖ್ಯಸ್ಥ ಶಿವ ಇಳಂಗೋ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಈ ವೇಳೆ ಮುಖ್ಯ ಮಾಹಿತಿ ಆಯುಕ್ತ ಕೆ.ಎಸ್.ಶ್ರೀಪತಿ ಅವರು, ಇಳಂಗೋ ಅವರಿಗೆ ನಿಂತುಕೊಂಡು ಉತ್ತರಿಸುವಂತೆ ಸೂಚಿಸಿದರು.

ಇದಕ್ಕೆ ಇಳಂಗೋ ಒಪ್ಪಲಿಲ್ಲ. ಇದರಿಂದ ಕ್ರುದ್ಧರಾದ ಶ್ರೀಪತಿ ಅವರು, ತಮಗೆ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿದ್ದಾನೆ ಎಂಬ ಆರೋಪ ಹೊರಿಸಿ, ಇಳಂಗೋ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳನ್ವಯ ಕೇಸು ದಾಖಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com