ನಮ್ಮ ಗುರಿ ಷರೀಫ್: ಮುಲ್ಲಾ ಫಜಲುಲ್ಲಾ

ಉಗ್ರರನ್ನು ಗಲ್ಲಿಗೇರಿಸುತ್ತಿರುವ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ತಾಲಿಬಾನ್..
ಉಗ್ರ ಮುಖಂಡ ಝಕಿ ಉರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)
ಉಗ್ರ ಮುಖಂಡ ಝಕಿ ಉರ್ ರೆಹಮಾನ್ ಲಖ್ವಿ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಉಗ್ರರನ್ನು ಗಲ್ಲಿಗೇರಿಸುತ್ತಿರುವ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ತಾಲಿಬಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಷರೀಫ್ ನೇತೃತ್ವದ ಪಿಎಂಎಲ್-ಎನ್ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವಂತೆ ತೆಹ್ರೀಕ್ ಎ ತಾಲಿಬಾನ್ ಉಗ್ರ ಸಂಘಟನೆ ಮುಖಂಡ ಮುಲ್ಲಾ ಫಜಲುಲ್ಲಾ ಆದೇಶಿಸಿದ್ದಾನೆ.

ಈ ಸಂಬಂಧ ಆತ ಆಫ್ಘನ್‌ನ ರಹಸ್ಯ ಸ್ಥಳದಲ್ಲಿ ರೆಕಾರ್ಡ್ ಮಾಡಿರುವ ವಿಡಿಯೋ ಕಳುಹಿಸಿಕೊಟ್ಟಿದ್ದಾನೆ. ನಮ್ಮ ಮೊದಲ ಶತ್ರು ಅವಾಮಿ ನ್ಯಾಷನಲ್ ಪಾರ್ಟಿ ಆಗಿತ್ತು. ಆದರೆ ಈಗ ಪಾಕ್ ಜಿಹಾದ್‌ನ ಭಾಗವಾಗಿರುವ ಮುಜಾಹಿದ್ದೀನ್‌ಗಳಿಗೆ ಆದೇಶ ನೀಡುತ್ತೇನೆ. ಪಿಎಂಎಲ್‌ಎನ್ ಇನ್ನು ನಮ್ಮ ಗುರಿ ಎಂದು ಫಜಲುಲ್ಲಾ ಹೇಳಿದ್ದಾನೆ.

ಫಜಲುಲ್ಲಾ ರೇಡಿಯೋ ಮುಲ್ಲ ಎಂದೇ ಕುಖ್ಯಾತಿ ಗಳಿಸಿದಾತ. ಒಂದು ಕಾಲದಲ್ಲಿ ಸ್ವಾತ್ ಕಣಿವೆಯ ತಾಲಿಬಾನ್ ನಾಯಕನಾಗಿದ್ದ ಮುಲ್ಲಾ, ನಂತರ 2013ರಲ್ಲಿ ಇಡೀ ಪಾಕಿಸ್ತಾನ ತಾಲಿಬಾನ್ ಸಂಘಟನೆಯ ಮುಖಂಡನಾದ. ಪೇಶಾವರ ಸೈನಿಕ ಶಾಲೆ ಮೇಲಿನ ದಾಳಿಯ ಸೂತ್ರದಾರ ಈತನೆಂದೇ ಹೇಳಲಾಗಿದೆ.

ಜಾಮೀನು ಸಿಕ್ಕರೂ ಲಖ್ವಿಗೆ ಜೈಲೇ ಗತಿ
ಆಫ್ಘನ್ ವ್ಯಕ್ತಿಯ ಅಪಹರಣ ಪ್ರಕರಣದಲ್ಲಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ. ಆದರೆ ಮುಂಬೈ ದಾಳಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸಾರ್ವಜನಿಕ ಸುವ್ಯವಸ್ಥೆ ದೃಷ್ಟಿಯಿಂದ ಸರ್ಕಾರ ಲಖ್ವಿಯನ್ನು ವಶಕ್ಕೆ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಸರ್ಕಾರ ಉಗ್ರನಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ನೀಡಿಲ್ಲ.

6 ವರ್ಷದ ಹಿಂದೆ ಆಫ್ಘನ್ ಪ್ರಜೆ ಮಹಮದ್ ದೌದ್ ಎಂಬುವವರು ಇಸ್ಲಾಮಾಬಾದ್‌ನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ದೌದ್ ಸಹೋದರ ಲಖ್ವಿ ವಿರುದ್ಧ ದೂರು ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com