ರಾಜೀವ್ ಗಾಂಧಿ ಹಂತಕನಿಗೆ ಶಿಕ್ಷೆ: ಲಂಕಾ ಸರ್ಕಾರ ನಿರ್ಧಾರ

ಶ್ರೀಲಂಕಾದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿ...
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ  ಅವರ ಹಂತಕ ಕುಮಾರನ್ ಪದ್ಮನಾಭನ್‌
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹಂತಕ ಕುಮಾರನ್ ಪದ್ಮನಾಭನ್‌

ಕೊಲಂಬೋ: ಶ್ರೀಲಂಕಾದಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಸರ್ಕಾರ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಆರೋಪಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದೆ.

ರಾಜೀವ್ ಹಂತಕ ಕುಮಾರನ್ ಪದ್ಮನಾಭನ್‌ನನ್ನು ಶ್ರೀಲಂಕಾ ಸರ್ಕಾರ 2009ರಲ್ಲಿ ವಶಕ್ಕೆ ತೆಗೆದುಕೊಂಡಿತ್ತು. ಆದರೆ, ಈತನಿಗೆ ಮಹಿಂದ ರಾಜಪಕ್ಸೆ ಸರ್ಕಾರ ಅತಿಗಣ್ಯ ವ್ಯಕ್ತಿಗಳಿಗೆ ನೀಡುವ ಸ್ವಾಗತ ನೀಡಿದ್ದರು. ರಾಜಪಕ್ಸೆ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಗೋತಭಯಾ ರಾಜಪಕ್ಸೆ ಎಲ್‌ಟಿಟಿಇ ನಾಯಕರ ಜತೆಗೆ ಹಣಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದರು.

ಅದರಂತೆ ವಿದೇಶದಲ್ಲಿಟ್ಟಿದ್ದ ಎಲ್‌ಟಿಟಿಇ ಆಸ್ತಿಯನ್ನು ಈ ನಾಯಕರು ತಮ್ಮದಾಗಿಸಿಕೊಂಡಿದ್ದರು. ಅದಕ್ಕಾಗಿ ಅವರು ಎಲ್‌ಟಿಟಿಇ ಹೋರಾಟಗಾರರಿಗೆ ರಕ್ಷಣೆ ಮತ್ತು ಭದ್ರತೆ ನೀಡಿದ್ದರು ಎಂದು ಆರೋಪ ಇತ್ತು. ಇದೇ ಕಾರಣಕ್ಕೆ ರಾಜೀವ್ ಹಂತಕನನ್ನು ಭಾರತಕ್ಕೆ ಗಡೀಪಾರು ಮಾಡಬೇಕೆನ್ನುವ ಅಂತಾರಾಷ್ಟ್ರೀಯ ಒತ್ತಡಕ್ಕೆ ಲಂಕಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com