ಶ್ವಾನ ದರ್ಶನಕ್ಕೆ ಸಾಲುಸಾಲು ಜನ

'ನಾಯಿ ಇದೆ ಎಚ್ಚರಿಕೆ' ಎಂಬ ಬೋರ್ಡ್...
ಹೆಬ್ಬಾಳದ  ಪಶು ವೈದ್ಯ ಕಾಲೇಜು ಬಳಿ ಭಾನುವಾರ ಕಂಡು ಬಂದ  ವಿವಿಧ ಜಾತಿಯ ಶಾನಗಳ ಪ್ರದರ್ಶನ
ಹೆಬ್ಬಾಳದ ಪಶು ವೈದ್ಯ ಕಾಲೇಜು ಬಳಿ ಭಾನುವಾರ ಕಂಡು ಬಂದ ವಿವಿಧ ಜಾತಿಯ ಶಾನಗಳ ಪ್ರದರ್ಶನ
Updated on: 

ಶ್ವಾನಗಳಿಗೂ ನಾನಾ ಸ್ಪರ್ಧೆ, ಬಹುಮಾನ
ಬೆಂಗಳೂರು:
'ನಾಯಿ ಇದೆ ಎಚ್ಚರಿಕೆ' ಎಂಬ ಬೋರ್ಡ್ ನೋಡಿದ್ರೆ ಅಲ್ಲಿಂದ ಕಾಲುಕೀಳುವ ಜನರು, ನಾಯಿಗಳನ್ನು ನೋಡಲು ಟಿಕೆಟ್ ಪಡೆದು ಸಾಲಿನಲ್ಲಿ ಕಾಲು ಗಟ್ಟಿಮಾಡಿ ನಿಂತಿದ್ದರು.

ಇಂತಹ ದೃಶ್ಯ ನಗರದ ಹೆಬ್ಬಾಳದ ಪಶು ವೈದ್ಯ ಕಾಲೇಜು ಬಳಿ ಭಾನುವಾರ ಕಂಡುಬಂತು. ಅವರು ನೋಡಲು ಕಾತರಪಟ್ಟಿದ್ದು ಸಾಕು ನಾಯಿಗಳನ್ನು. ಅದರಲ್ಲೂ ದಷ್ಟಪುಷ್ಟವಾಗಿ ಬೆಳೆದು, ಆಕರ್ಷಕವಾಗಿ ಕಾಣುವ ನಾಯಿಗಳನ್ನು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ವಿವಿಧ ಜಾತಿಯ ಶಾನಗಳ ಪ್ರದರ್ಶನ ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.

ಪಶು ವೈದ್ಯಕೀಯ ಕಾಲೇಜು ಹಿಂಭಾಗದ ಹಾಕಿ ಮೈದಾನದಲ್ಲಿ ಮೈಸೂರು ಕೆನಲ್ ಆಯೋಜಿಸಿದ್ದ ಶ್ವಾನ ಪ್ರದರ್ಶನ ಇಂತಹ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಭಾರದತ ಮಟ್ಟಿಗೆ ಈಗ ದೈತ್ಯ ಗಾತ್ರದ ತಳಿ ಎಂದೇ ಖ್ಯಾತಿ ಪಡೆದ ಗ್ರೇಟ್‌ಡೇನ್ ಸೇರಿದಂತೆ ಅತಿ ಸಣ್ಣ ಹಾಗೂ ನೋಡಲು ಮುದ್ದಾದ ತಳಿಗಳಾದ ಪಗ್, ಪೂಡ್ಲೆ, ಟೆರಿಯರ್ ನಾಯಿಗಳು ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೆಯಾಗಿದ್ದವು.

ಗಮನ ಸೆಳೆದ ಪಗ್, ಟೆರಿಯರ್

ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ಹಿಲ್ಲರ್, ಚಿಪ್ಪರಿಕೆ, ಟೆರಿಯರ್, ಪಗ್ ಮತ್ತು ಯಾರ್ಕಿಸಿರೆ ಟೆರಿಯರ್ ಜಾತಿಯ ಪುಟ್ಟ ಪುಟ್ಟ ನಾಯಿಗಳು ತಮ್ಮ ಮಾಲೀಕರೊಂದಿಗೆ ಹೆಜ್ಜೆ ಹಾಕಿ ಬಂದಾಗ ವೀಕ್ಷಕರಿಗೆ ಭರಪೂರ ಮನರಂಜನೆ ದೊರೆಯಿತು. ನಂತರ ಬಾಕ್ಲರ್, ಬ್ರಿಡೆಡ್ ಕೂಲಿ, ಕ್ಯಾಟಲ್ ಡಾಗ್, ಸೈಬಿರಿಯನ್ ಹಸ್ಕಿಯಂತಹ ವಿಶೇಷ ಮೈಮಾಟದ ನಾಯಿಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿದವು.

ಸ್ಪಧೆಗಲ್ಲದಿದ್ದರೂ ಪ್ರದರ್ಶನಕ್ಕಾಗಿ ಅನೇಕರು ತಾವು ಸಾಕಿದ ಅಪರೂಪದ ಶ್ವಾನಗಳನ್ನು ಅಲ್ಲಿಗೆ ತಂದಿದ್ದರು. ವಿಶೇಷವಾಗಿ ಸುಂದರುವಾದ ಯುವತಿಯರ ಮಡಿಲಲ್ಲಿ ಬೆಚ್ಚಗೆ ಕುಳಿತಿದ್ದ ಉದ್ದ ಕೂದಲಿನ ಪುಟ್ಟದಾದ ಟೆರಿಯರ್ ಜಾತಿಯ ಶ್ವಾನಗಳು ಮಕ್ಕಳಿಗೆ ಸಾಕಷ್ಟು ಖುಷಿ ನೀಡಿದವು.

ಇನ್ನು ಬಿಎಂಡಬ್ಲ್ಯೂ, ಇನ್ನೋವಾದಂತಹ ದುಬಾರಿ ಕಾರುಗಳಲ್ಲಿ ದೂರದ ಊರುಗಳಿಂದ ಪ್ರಯಾಣ ಮಾಡಿ ಬಂದಿದ್ದ ಸೈಬೀರಿಯನ್ ಹಸ್ಕಿ, ಕಾಕರ್ ಸ್ಪೆನಿಯಲ್ ನಾಯಿಗಳು ಪ್ರದರ್ಶನದ ಪೂರ್ವದಲ್ಲಿ ಮತ್ತು ಪ್ರದರ್ಶನದ ನಂತರ ಕಾರಿನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದವು. ಸಾರ್ವಜನಿಕರು ಕಂಡಾಕ್ಷಣ ಕಾರಿನ ಕಿಟಕಿಯಾಚೆ ಕತ್ತು ಹಾಕಿ ರಂಜಿಸುತ್ತಿದ್ದವು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖುಮಾ ಪಚಾವೊ ಶ್ವಾನ ಪ್ರದರ್ಶನಕ್ಕೆ ಬೆಳಗ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಪಶು ವೈದ್ಯ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಕುಲ ಸಚಿವ ಡಾ.ಎಚ್.ಎಂ.ಜಯಪ್ರಕಾಷ್, ಪೆಟ್‌ಕೇರ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಜೈಸ್ವಾಲ್, ಮೈಸೂರು ಕೆನಲ್ ಕ್ಲಬ್ ಮುಖ್ಯಸ್ಥ ಬಿ.ಸಿ.ನರಸಿಂಹ ಮೂರ್ತಿ ಹಾಜರಿದ್ದರು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕವೂ ಈ ಶ್ವಾನ ಪ್ರದರ್ಶನ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com