ಭಯೋತ್ಪಾದನೆ ಕೃತ್ಯಕ್ಕೆ ಹವಾಲ ಹಣ

ಭಟ್ಕಳದಲ್ಲಿ ಬಂಧಿತ ನಾಲ್ವರು ಶಂಕಿತ ಉಗ್ರರಿಗೆ ಭಯೋತ್ಪಾದನೆ ಕೃತ್ಯ ನಡೆಸಲು...
ಭಯೋತ್ಪಾದನೆ ಕೃತ್ಯಕ್ಕೆ ಹವಾಲ ಹಣ ಬಳಸುತ್ತಿದ್ದ ಉಗ್ರರು
ಭಯೋತ್ಪಾದನೆ ಕೃತ್ಯಕ್ಕೆ ಹವಾಲ ಹಣ ಬಳಸುತ್ತಿದ್ದ ಉಗ್ರರು

ಬೆಂಗಳೂರು: ಭಟ್ಕಳದಲ್ಲಿ ಬಂಧಿತ ನಾಲ್ವರು ಶಂಕಿತ ಉಗ್ರರಿಗೆ ಭಯೋತ್ಪಾದನೆ ಕೃತ್ಯ ನಡೆಸಲು ದೇಶ-ವಿದೇಶಗಳಿಂದ ಹವಾಲ ಹಣ ಬರುತ್ತಿತ್ತು!

ಇಂಥ ಆಘಾತಕಾರಿ ವಿಷಯ ತನಿಖೆಯ ಸಂದರ್ಭದಲ್ಲಿ ಬಹಿರಂಗವಾಗಿದ್ದು, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸುದ್ದಿಗಾರರಿಗೆ ಸೋಮವಾರ ಇದನ್ನು ತಿಳಿಸಿದ್ದಾರೆ.

ಅವರು ಹೇಳಿದ್ದಿಷ್ಟು

  • ಕಳೆದ ಬುಧವಾರ ಬೆಂಗಳೂರು, ಭಟ್ಕಳದಲ್ಲಿ ಬಂಧಿತ ಹಾಗೂ ಭಾನುವಾರ ತಡರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತ ನಾಲ್ವರು ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್ ಜತೆ ನಂಟಿದೆ.
  • ಈ ಉಗ್ರರಿಗೆ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆ ಸಂಘಟನೆಗಳಿಂದ ಹವಾಲ ಹಣ ಬಂದಿರುವುದು ಖಚಿತವಾಗಿದೆ. ಇವರು ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ.
  • ಹಲವು ರಾಷ್ಟ್ರಗಳಿಂದ ಹಣ ಬರುತ್ತಿರುವುದು ಖಚಿತವಾಗಿದ್ದು, ಯಾವ ರಾಷ್ಟ್ರಗಳಿಂದ ಬರುತ್ತಿತ್ತು ಎಂಬುದನ್ನು ಸದ್ಯಕ್ಕೆ ನಿಖರವಾಗಿ ಹೇಳಲು ಆಗುವುದಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು.
  • ಬಂಧಿತರ ಮನೆಯಲ್ಲಿ ಸ್ಫೋಟಕ ವಸ್ತುಗಳು ಸಿಕ್ಕಿವೆ ಎಂಬ ಕಾರಣಕಷ್ಟೇ ಅವರನ್ನು ಬಂಧಿಸಿಲ್ಲ.
  • ಈ ಹಿಂದೆ ದೇಶದ ನಾನಾ ನಗರಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲೂ ಹೋಮಿಯೋಪಥಿ ವೈದ್ಯನಾದ ಸಯ್ಯದ್ ಅಫಕ್, ಅಬ್ದುಲ್ ಸರ್ಬೂ, ಸದ್ದಾಮ್ ಹುಸೇನ್ ಹಾಗೂ ರಿಯಾಜ್ ಅಹ್ಮದ್ ಸಯ್ಯದ್ರ ಕೈವಾಡ ತನಿಖೆಯಿಂದ ರುಜುವಾತಾಗಿದೆ.
  • ಬಂಧಿತರಲ್ಲಿ ಒಬ್ಬ ಬಾಂಬ್ ತಯಾರಿಕೆಯಲ್ಲಿ ನಿಪುಣ. ಈತ ಬೆಂಗಳೂರು ಮತ್ತು ಭಟ್ಕಳವನ್ನು ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು ತನ್ನ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com