ಮೋದಿ ಹೆಸರಿನ ದ್ವೀಪ ಇದೀಗ ಮಾರಟಕ್ಕೆ!

ಕೊನೆಗೊಂದು ಐಡಿಯಾ ಮಾಡಿದ್ರು...
'ಮೋದಿ' ಹೆಸರು ಮಾರಟಕ್ಕೆ!
'ಮೋದಿ' ಹೆಸರು ಮಾರಟಕ್ಕೆ!
Updated on

ಅಥೆನ್ಸ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಷ್ಟೇ ಅಲ್ಲ ವಿಶ್ವ ಮಟ್ಟದಲ್ಲಿ ಬ್ರ್ಯಾಂಡ್ ಆಗಿದ್ದಾರೆ. ಇದೇನು ಹೊಸ ವಿಷ್ಯ ಅಂತ ಕೇಳ್ಬೋದು. ಆದ್ರೆ, ಇಲ್ಲೇ ಇದೆ ಅಸಲಿ ವಿಷ್ಯ. ಇದೀಗ ಗ್ರೀಕ್‌ನಲ್ಲಿ 'ಮೋದಿ' ಹೆಸರು ಮಾರಟಕ್ಕಿದೆ!

ಗ್ರೀಕ್‌ನ ರಾಜಧಾನಿ ಅಥೆನ್ಸ್‌ನ ಪಶ್ಚಿಮ ತುದಿಯಲ್ಲೊಂದು ಏನೇನೂ ಅಭಿವೃದ್ಧಿಯಾಗದ ಪರ್ಯಾಯ ದ್ವೀಪವೊಂದಿತ್ತು. ಇದು ಖಾಸಗಿಯವರ ಒಡೆತನದಲ್ಲಿತ್ತು. ಏನೇ ಮಾಡಿದರೂ ಇದನ್ನು ಅಭಿವೃದ್ಧಿ ಪಡಿಸಲೂ ಆಗಿಲ್ಲ, ಮಾರಾಟ ಮಾಡಲು ಮುಂದಾದರೆ ಕೊಳ್ಳಲೂ ಯಾರು ಮುಂದೆ ಬರುತ್ತಿಲ್ಲ.

ಹೀಗಾಗಿ ಯೋಚನೆಗೆ ಬಿದ್ದ ಅಲ್ಲಿನ ರಿಯಲ್ ಎಸ್ಟೇಲ್ ಏಜೆಂಟರು ಕೊನೆಗೊಂದು ಐಡಿಯಾ ಮಾಡಿದ್ರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ವಿದೇಶಗಳೆಲ್ಲೆಡೆ ಅಭಿಮಾನಿಗಳ ಮಹಾಪೂರವೇ ಇರುವುದರಿಂದ ಅವರ ಹೆಸರನ್ನು ಇಟ್ಟು ಲಾಭ ಪಡೆಯಲು ಮುಂದಾಗಿದ್ದಾರೆ.

ಹೀಗಾಗಿ ಗ್ರೀಕ್‌ನ ಲೋನಿಯನ್ ಸಮುದ್ರದಿಂದ ಆವೃತವಾಗಿರುವ ಈ ಪರ್ಯಾಯ ದ್ವೀಪಕ್ಕೆ ಮೋದಿ ಎಂದು ನಾಮಕರಣ ಮಾಡಿದ್ದು, ಮಾರಟಕ್ಕಿದೆ ಎಂದು ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿಕೊಂಡಿದ್ದಾರೆ ಇದರ ಮಾಲೀಕರು. 2012ರಲ್ಲೇ ಮಾರಾಟಕ್ಕೆ ಇಟ್ಟಿದ್ದರೂ ಇದುವರೆಗೂ ಯಾರೂ ಕೊಂಡುಕೊಳ್ಳಲು ಮುಂದೆ ಬಂದಿಲ್ಲ.

ಒಟ್ಟು 51 ಎಕರೆ ವಿಸ್ತೀರ್ಣ ಹೊಂದಿರುವ ಮೋದಿ ದ್ವೀಪವನ್ನು ಖರೀದಿಸಲು ಇದೀಗ ರೂ.8.24 ಕೋಟಿ ಬೆಲೆ ಕಟ್ಟಲಾಗಿದೆ. ಸಾಮಾನ್ಯವಾಗಿ ಇಂಥ ಪ್ರದೇಶದಲ್ಲಿರುವ ದ್ವೀಪವನ್ನೂ ಯಾರೂ ಮಾರಾಟ ಮಾಡಲು ಮುಂದೆ ಬರುತ್ತಿರಲಿಲ್ಲ.

ಏಕೆಂದರೆ, ಇಲ್ಲಿನ ವಾತಾವರಣ ಸುಂದರವಾಗಿರುವುದರಿಂದ ಕುಟುಂಬದವರೇ ಇಲ್ಲಿ ಹೆಚ್ಚಾಗಿ ವಾಸ ಮಾಡುತ್ತಿದ್ದರು. ಆದರೆ, ಈಚೆಗೆ ಅಲ್ಲಿ ರಿಯಲ್ ಎಸ್ಟೇಟ್ ಉದ್ಯಮ ತೀವ್ರಗತಿಯಲ್ಲಿ ಬದವಾಲಣೆ ಪಡೆಯುತ್ತಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ.

ಹೀಗಾಗಿ ಕೆಲವು ಕಡೆ ಭೂಮಿಗೆ ಬಂಗಾರದ ಬೆಲೆಯೂ ಸಿಗುತ್ತಿದೆ. ಈ ಜಾಗವನ್ನು ಖರೀದಿಸಿದರೆ, ಉತ್ತಮ ಪ್ರವಾಸಿ ತಾಣವಾಗಿಯೋ ರೆಸಾರ್ಟ್ ಆಗಿಯೋ ಹೋಟೆಲ್ ಸೌಲಭ್ಯ ಕಲ್ಪಿಸಲು ಉತ್ತಮ ಅವಕಾಶವಿದೆ ಎಂಬುದು ದ್ವೀಪದ ಮಾಲೀಕರ ಹೇಳಿಕೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com