
ನವದೆಹಲಿ: ಅಸ್ಸಾಂನ ಸೋನಿತ್‌ಪುರ ಪ್ರದೇಶದಲ್ಲಿ ನಡೆದಿದ್ದ ನರಮೇಧಕ್ಕೆ ಸಂಬಂಧಿಸಿದಂತೆ ಮೂವರು ಬೋಡೊ ಉಗ್ರರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಅಸ್ಸಾಂನಾದ್ಯಂತ ಆದಿವಾಸಿಗಳ ಹತ್ಯಾಕಾಂಡದ ರೂವಾರಿಗಳಾದ ಅಜಾಯ್ ಬಸುಮತ್ರಿ, ದಿಲೀಪ್ ಬಸುಮತಿ, ಖುಮ್ರಿ ಬಸುಮತ್ರಿ ಬೋಡೊ ಉಗ್ರರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಅಜಾಯ್ ಬಸುಮತ್ರಿ ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎಪ್ ಬಿ)ದ ಮೂರನೇ ಬೆಟಾಲಿಯನ್‌ನ ಮುಖ್ಯಸ್ಥ ಎಂದು ಹೇಳಲಾಗುತ್ತಿದೆ.
ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಸ್ಸಾಂ ಪೊಲೀಸರು ಬೋಡೊ ಉಗ್ರ ಮೊಹಮ್ಮದ್ ಜೋಯನಾಲ್ ಹಾಗೂ ಅಬ್ದುಲ್ ಕರೀಂ ಎಂಬುವರನ್ನು ಬಂಧಿಸಿದ್ದರು. ಇದರ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದಂತಾಗಿದೆ.
ಬೋಡೊ ಉಗ್ರರು ಅಸ್ಸಾಂನಲ್ಲಿ ಸರಣಿ ದಾಳಿ ನಡೆಸಿ 78 ಮಂದಿ ಅಮಾಯಕರನ್ನು ಹತ್ಯೆಗೈದಿದ್ದರು. ಘಟನೆಯಲ್ಲಿ ನೂರಾರು ಮಂದಿಗೆ ಗಾಯಗಳಾಗಿದ್ದವು.
Advertisement