ಆಸ್ಕರ್ ರೇಸ್ನಿಂದ ರೆಹಮಾನ್ ಹೊರಕ್ಕೆ

ಕೊಚಾಡೈಯಾನ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶ...
ಎ.ಆರ್.ರೆಹಮಾನ್ ಆಸ್ಕರ್ ಪಟ್ಟಿಯಿಂದ ಹೊರಕ್ಕೆ
ಎ.ಆರ್.ರೆಹಮಾನ್ ಆಸ್ಕರ್ ಪಟ್ಟಿಯಿಂದ ಹೊರಕ್ಕೆ

ಮುಂಬೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಆಸ್ಕರ್ ಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ಹಾಲಿವುಡ್ ಚಿತ್ರಗಳಾದ ದಿ ಹಂಡ್ರೆಡ್-ಫೂಟ್ ಜರ್ನಿ, ಮಿಲಿಯನ್ ಡಾಲರು ಆರ್ಮ್ ಮತ್ತು ರಜನಿಕಾಂತ್ ನಟಿಸಿರುವ ತಮಿಳು ಚಿತ್ರ ಕೊಚಾಡೈಯಾನ್ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರೆಹಮಾನ್ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ಉತ್ತಮ ಸಂಗೀತ ನಿರ್ದೇಶಕ್ಕಾಗಿ ಅಂತಿಮ ಪಟ್ಟಿಯಲ್ಲಿ ಅಲೆಗ್ಸಾಂಡರ್ ಡೆಸ್ ಪ್ಲಾಟ್(ದಿ ಗ್ರ್ಯಾಂಡ್ ಬುದಾಪೆಸ್ಟ್ ಹೊಟೇಲ್ ಮತ್ತು ದಿ ಲಿಮಿಟೇಷನ್ ಗೇಮ್), ಹನ್ಸ್ ಝಿಮ್ಮರ್(ಇಂಟರ್ ಸ್ಟೆಲ್ಲರ್), ಗ್ಯಾರಿ ಯೆರ್ಶಾನ್(ಮಿ.ಟರ್ನರ್) ಮತ್ತು ಜೊಹಾನ ಜೊಹಾನ್ಸನ(ದಿ ಥಿಯರಿ ಆಫ್ ಎವ್ರಿಥಿಂಗ್) ಹೆಸರು ಸ್ಥಾನಪಡೆದುಕೊಂಡಿದೆ.

ಅತ್ಯುತ್ತಮ ಚಿತ್ರ: ಗ್ರ್ಯಾಂಡ್ ಬುದಾಪೆಸ್ಟ್ ಹೊಟೇಲ್, ಬರ್ಡ್ಮ್ಯಾನ್ ಅತ್ಯುತ್ತಮ ಚಿತ್ರಕ್ಕಾಗಿ ಪೈಪೋಟಿಯಲ್ಲಿದೆ. ಇದಲ್ಲದೆ, ದಿ ಇಮಿಟೇಷನ್ ಗೇಮ, ಅಮೆರಿಕನ್ ಸ್ಲಿಪ್ಪರ್ ಮತ್ತು ಬಾಯ್ಹುಡು ಅತ್ಯುತ್ತಮ ಚಿತ್ರ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com