ಕಿರಣ್ ಬೇಡಿ ವಿರುದ್ಧ 'ಅಣ್ಣಾ' ಮುನಿಸು..!

ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದ...
ಕಿರಣ್ ಬೇಡಿ ಮತ್ತು ಅಣ್ಣಾ ಹಜಾರೆ (ಸಂಗ್ರಹ ಚಿತ್ರ)
ಕಿರಣ್ ಬೇಡಿ ಮತ್ತು ಅಣ್ಣಾ ಹಜಾರೆ (ಸಂಗ್ರಹ ಚಿತ್ರ)

ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಿರಣ್ ಬೇಡಿ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಅವರು ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಕಿರಣ್ ಬೇಡಿ ವಿರುದ್ಧ ಅಣ್ಣಾ ಹಜಾರೆ ಕೋಪಗೊಂಡಿದ್ದು, ಅವರ ಯಾವುದೇ ಕರೆಗಳನ್ನು ಅವರು ಸ್ವೀಕರಿಸುತ್ತಿಲ್ಲವಂತೆ. ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಿರಣ್ ಬೇಡಿ ಅವರು ತಮ್ಮ ರಾಜಕೀಯ ಸೇರ್ಪಡೆ ಕುರಿತಂತೆ ಅಣ್ಣಾ ಹಜಾರೆ ಅವರೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ ಮತ್ತು ಅವರ ಸಲಹೆ ಪಡೆದಿಲ್ಲ ಎಂಬುದೇ ಅಣ್ಣಾ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಅಂದರೆ ಕಿರಣ್ ಬೇಡಿ ಅವರು ಬಿಜೆಪಿಗೆ ಸೇರ್ಪಡೆಗೊಂಡ ದಿನವೇ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದ ಅಣ್ಣಾ ಹಜಾರೆ ಅವರು, ರಾಜಕೀಯಕ್ಕೆ ಧುಮುಕುವ ಕುರಿತು ಕಿರಣ್ ಬೇಡಿ ಅವರು ತಮ್ಮೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಅಲ್ಲದೆ ಕಳೆದ ಒಂದು ವರ್ಷದಿಂದ ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದರು. ಆದರೆ ಕಿರಣ್ ಬೇಡಿ ಅವರ ಆಪ್ತರ ಪ್ರಕಾರ ಬಿಜೆಪಿ ಸೇರ್ಪಡೆ ಬಳಿಕ ಕಿರಣ್ ಬೇಡಿ ಅವರು ಅಣ್ಣಾ ಹಜಾರೆ ಅವರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಅಣ್ಣಾ ಅವರು ಕರೆಯನ್ನು ಸ್ವೀಕರಿಸಲಿಲ್ಲ ಎಂದು ತಿಳಿದುಬಂದಿದೆ.

2011ರಲ್ಲಿ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ನಡೆದ India Against Corruption ಹೋರಾಟವು ದೇಶಾದ್ಯಂತ ಅಭೂತ ಪೂರ್ವ ಯಶಸ್ಸು ಸಾಧಿಸಿತ್ತು. ಅಣ್ಣಾ ಅವರೊಂದಿಗೆ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿದ್ದ ಕಿರಣ್ ಬೇಡಿ ಅವರು ಹೋರಾಟದಲ್ಲಿ ಮತ್ತು ಅಣ್ಣಾ ಬಳಗದ ಪ್ರಮುಖರಲ್ಲಿ ಒಬ್ಬರಾಗಿದ್ದರು. ನಂತರ 'ಟೀಂ ಅಣ್ಣಾ' ತಂಡವು ಕಾರಣಾಂತರಗಳಿಂದ ಒಡೆದು ಹೋಗಿತ್ತು. ಅದೇ ತಂಡದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯದತ್ತ ಮರಳಿ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com