ಬಿಹಾರದಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ ಮೂವರು ಬಲಿ

ಅನ್ಯ ಕೋಮುಗಳ ಪ್ರೀತಿಯ ಕಾಡ್ಗಿಚ್ಚು ಒಂದು ಗ್ರಾಮವನ್ನೇ ಸುಟ್ಟು ಹಾಕಿದ್ದಲ್ಲದೆ ಮೂವರ ಸಾವಿಗೆ ಕಾರಣವಾಗಿದೆ. ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯ ಸರಯ್ಯಾ ಗ್ರಾಮದಲ್ಲಿ ಅನ್ಯ ಕೋಮುಗಳ...
ಹೊತ್ತು ಉರಿದ ಗ್ರಾಮ
ಹೊತ್ತು ಉರಿದ ಗ್ರಾಮ

ಮುಜಫ್ಫರ್‌ಪುರ: ಅನ್ಯ ಕೋಮುಗಳ ಪ್ರೀತಿಯ ಕಾಡ್ಗಿಚ್ಚು ಒಂದು ಗ್ರಾಮವನ್ನೇ ಸುಟ್ಟು ಹಾಕಿದ್ದಲ್ಲದೆ ಮೂವರ ಸಾವಿಗೆ ಕಾರಣವಾಗಿದೆ.

ಬಿಹಾರದ ಮುಜಫ್ಫರ್‌ಪುರ ಜಿಲ್ಲೆಯ ಸರಯ್ಯಾ ಗ್ರಾಮದಲ್ಲಿ ಅನ್ಯ ಕೋಮುಗಳ ಪ್ರೀತಿಯ ಕಿಚ್ಚಿಗೆ ಮೂವರು ಸಜೀವವಾಗಿ ದಹನವಾಗಿದ್ದು, ಮತ್ತಿಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಹತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಯುವಕನ ಅಪಹರಣವಾಗಿತ್ತು. ಆ ಯುವಕನ ಶವ ನಿನ್ನೆ ಯುವತಿಯ ತಂದೆಯ ಜಮೀನಿನಲ್ಲಿ ಪತ್ತೆಯಾಗಿದ್ದರಿಂದ ಹುಡುಗಿಯ ಕಡೆಯವರೆ ಯುವಕನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಬಹುಸಂಖ್ಯಾತ ಕೋಮಿನ ಒಂದು ಗುಂಪು, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಗ್ರಾಮಕ್ಕೆ ನುಗ್ಗಿ 40ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಗೆ ಮೂವರು ಸಜೀವ ದಹನವಾಗಿತ್ತು. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನ್ಯ ಕೋಮಿನ ಯುವಕನನ್ನು ತಮ್ಮ ಮಗಳು ಪ್ರೀತಿಸುತ್ತಿರುವುದಕ್ಕೆ ಹುಡುಗಿಯ ತಂದೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಯುವಕ ಅಪಹರಣವಾಗಿ ಆತನ ಶವ ಹುಡುಗಿಯ ತಂದೆಯ ಜಮೀನಿನಲ್ಲಿ ಪತ್ತೆಯಾಗಿದ್ದರಿಂದ ಹಿಂಸಾಚಾರ ಭುಗಿಲೆದಿದ್ದೆ. ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಕಿಯ ಕಾಡ್ಗಿಚ್ಚಿಗೆ ಬಲಿಯಾದವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಬಿಹಾರ ಸರ್ಕಾರ ಘೋಷಿಸಿದೆ. ಸದ್ಯ ಸರಯ್ಯಾ ಗ್ರಾಮದಲ್ಲಿ ಪರಿಸ್ಥಿತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com