
ಇಸ್ಲಾಮಾಬಾದ್: ಭಾರತದ ಒತ್ತಡ ಮುಂದುವರಿದ ಹಿನ್ನೆಲೆಯಲ್ಲಿ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝಕಿ ಉರ್ ರೆಹಮಾನ್ ಲಖ್ಮಿ ಬಂಧನ ಅವಧಿಯನ್ನು ಪಾಕಿಸ್ತಾನ ಸರ್ಕಾರ ಒಂದು ತಿಂಗಳು ವಿಸ್ತರಣೆ ಮಾಡಿದೆ ಎಂದು ಸೋಮವಾರ ವರದಿಗಳು ತಿಳಿಸಿವೆ.
ಲಖ್ವಿ ಬಂಧನ ಅವಧಿಯನ್ನು ಕಳೆದ ವಾರ 10 ದಿನಗಳ ಕಾಲ ಮುಂದೂಡಲಾಗಿತ್ತು. ಇದೀಗ ಮತ್ತೆ ಒಂದು ತಿಂಗಳು ವಿಸ್ತರಿಸಲಾಗಿದೆ.
ಝಕಿ ಉರ್ ರೆಹಮಾನ್ ಲಖ್ವಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಿಂದಲೂ ಜೈಲುವಾಸದಲ್ಲಿದ್ದ. ಕಳೆದ ವರ್ಷ ಡಿ.18ರಂದು ಭಯೋತ್ಪಾದನಾ ನಿಗ್ರಹ ಕೋರ್ಟ್ ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಮತ್ತೆ ಆತನನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಲಖ್ವಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು. ನಂತರ ಹೈಕೋರ್ಟ್ ಆತನ ಬಂಧನದ ಆದೇಶ ಅಮಾನತಿನಲ್ಲಿಟ್ಟು ಜಾಮೀನು ನೀಡಿತ್ತು. ಪಾಕಿಸ್ತಾನದ ಈ ನಿಲುವಿಗೆ ದೇಶದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಲಖ್ವಿ ಬಿಡುಗಡೆ ಕುರಿತಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು.
Advertisement