
ಇಸ್ಲಾಮಾಬಾದ್: 2008ರ ಮುಂಬೈ ಸ್ಫೋಟದ ಪ್ರಮುಖ ರೂವಾರಿ ಝಕೀವುರ್ ರೆಹಮಾನ್ ಲಖ್ವಿಯನ್ನು ಹೆಚ್ಚಿನ ವಿಚಾರಣೆಗಾಗಿ ಭಾರತಕ್ಕೆ ಒಪ್ಪಿಸಿ ಎಂದು ಅಮೆರಿಕ ಮತ್ತು ಬ್ರಿಟನ್ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.
ಇದರಿಂದ ಎರಡು ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಗಳೂ ವೃದ್ಧಿಸುವುದಲ್ಲದೆ, ಭಾರತಕ್ಕೂ ಸ್ವತಂತ್ರ ವಿಚಾರಣೆ ನಡೆಸಲು ಅನುಕೂಲವಾಗಲಿದೆ ಎಂದು ಪಾಕ್‌ಗೆ ಸಲಹೆ ನೀಡಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಸೋಮವಾರ ವಾದ ಮಂಡಿಸಿದ ಪಾಕ್ ಸರ್ಕಾ ವಕೀಲ, ಮುಂಬೈ ಸ್ಫೋಟ ರೂವಾರಿ ಲಖ್ವಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಎರಡು ದೇಶಗಳು ಬೇಡಿಕೆ ಇಟ್ಟಿವೆ ಎಂದು ಹೇಳಿದ್ದಾರೆ. ಆದರೆ, ಆ ಎರಡು ದೇಶ ಯಾವುದು ಎಂಬ ಬಗ್ಗೆ ಮಾತ್ರ ಗುಟ್ಟು ಬಿಟ್ಟುಕೊಡಲಿಲ್ಲ.
2008ರಲ್ಲಿ ನಡೆದ ಮುಂಬೈ ದಾಳಿಯಲ್ಲಿ ಭಾರತೀಯರು ಸೇರಿದಂತೆ ಹಲವಾರು ದೇಶಗಳ ಜನತೆಯೂ ಸಾವನ್ನಪ್ಪಿದ್ದಾರೆ. ಲಖ್ವಿಯನ್ನು ಹಸ್ತಾಂತರಿಸಿದರೆ, ಭಾರತಕ್ಕೆ ಸ್ವತಂತ್ರವಾಗಿ ವಿಚಾರಣೆ ನಡೆಸಲು ಅನುಕೂಲವಾಗುವುದರ ಜತೆಗೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೂ ಒಳ್ಳೆಯದು ಎಂಬ ಸಲಹೆಯನ್ನು ನೀಡಿವೆ ಎಂದು ಪಾಕ್‌ನ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
Advertisement