ವಿಶ್ವ ಆರ್ಥಿಕ ವೇದಿಕೆಯಲ್ಲಿ ಮೇಕ್ ಇನ್ ಝಂಡಾ

ಸ್ವಿಜರ್ಲೆಂಡ್‍ನ ದಾವೋಸ್‍ನಲ್ಲಿ ಬುಧವಾರದಿಂದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್ ) ಸಮ್ಮೇಳನ ನಡೆಯುತ್ತಿದೆ...
ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ

ನವದೆಹಲಿ: ಸ್ವಿಜರ್ಲೆಂಡ್‍ನ ದಾವೋಸ್‍ನಲ್ಲಿ ಬುಧವಾರದಿಂದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್ ) ಸಮ್ಮೇಳನ ನಡೆಯುತ್ತಿದೆ. ಇಲ್ಲಿ ಭಾರತ `ಮೇಕ್ ಇನ್ ಇಂಡಿಯಾ ' ಎಂಬ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇದಕ್ಕಾಗಿ ಅಲ್ಲಿನ ಬೀದಿ ಬೀದಿಗಳಲ್ಲಿ ಕಟೌಟ್‍ಗಳನ್ನು ಹಾಕಿ ವಿಶ್ವದ ದೃಷ್ಟಿಯನ್ನು ತನ್ನತ್ತ ಸೆಳೆಯಲು ಮುಂದಾಗಿದೆ.
ಈ ಸಮ್ಮೇಳನದಲ್ಲಿ ಹಲವು ದೇಶಗಳ 2,500 ಜನಪ್ರತಿನಿಧಿ ಗಳು ಮತ್ತು ಉದ್ದಿಮೆದಾರರು ಪಾಲ್ಗೊಳ್ಳಲಿದ್ದಾರೆ. ಇದರ ಸಂಪೂರ್ಣ ಲಾಭ ಪಡೆಯಲು ಭಾರತ ಮುಂದಾಗಿದೆ. ಈ
ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ `ಮೇಕ್ಇನ್ ಇಂಡಿಯಾ' ಪರಿಕಲ್ಪನೆಯ ಸಾಕಾರಕ್ಕೆ ಪೂರ್ಣ ಪ್ರಮಾಣದ ಪ್ರಯತ್ನ ಹಾಕಲಾಗುತ್ತಿದೆ.
ಇದಕ್ಕಾಗಿ ದಾವೋಸ್‍ನ ರೆಸ್ಟೋರೆಂಟ್, ಬೀದಿ ಬದಿಯ ಹೋರ್ಡಿಂಗ್ಸ್, ಬಸ್ಗಳು , ಬೇಕರಿ ಸೇರಿದಂತೆ ಅಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತುಗಳನ್ನು ಹಾಕಲಾಗಿದೆ. `ಹಾರ್ಡ್‍ವೇರ್ ಇರಲಿ, ಸಾಫ್ಟ್ ವೇರ್  ಆದರೂ ಸರಿ ಅಥವಾ ಯಾವುದಾದರೂ ಸರಿ. ನೀವು ಇಷ್ಟ ಪಟ್ಟದ್ದನ್ನು ನಮ್ಮಲ್ಲಿ ತಯಾರಿಸಿ. ನಮ್ಮ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಪಾಲ್ಗೊಳ್ಳಿ' ಎಂಬ ವಾಕ್ಯದೊಡನೆ ಎಲ್ಲೆಡೆ ಭಾರತ ಹೆಸರು ರಾರಾಜಿಸುವಂತೆ ಮಾಡಲಾಗಿದೆ
ಭಾರತವನ್ನು ಈ ಮೂಲಕ `ಬ್ರಾಂಡ್' ಮಾಡಲು  ಹೊರಟ ಪ್ರಯತ್ನವು ಅಲ್ಲಿನ ಮಾಧ್ಯಮ ಗಳಲ್ಲೂ ಭಾರಿ ಚರ್ಚೆಗೊಳಪಟ್ಟಿವೆ.
ಮುಂದಿನ ನಡೆ ಬಗ್ಗೆ ಕುತೂಹಲಭರಿತವಾಗಿ ನೋಡಲಾಗುತ್ತಿದೆ.

ಜೇಟ್ಲಿ  ಮಾತುಗಳು
ಭಾರತವು ತನ್ನ `ಮೇಕ್ ಇನ್ ಇಂಡಿಯಾ ' ಸರಕನ್ನು ಮಾರಾಟ ಮಾಡಬೇಕು . ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಪ್ರಯತ್ನ ದೊಡ್ಡದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಾವೋಸ್‍ನಲ್ಲಿ ನಾಲ್ಕು ದಿನ ನಡೆಯುವ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಹಲವು ರಾಜ್ಯಗಳ ಮುಖ್ಯಸ್ಥರು
ಹಾಗೂ ಅಧಿಕಾರಿಗಳಿಗೆ ಕಿವಿಮಾತು ಚೀನಾದಲ್ಲಿ ಇದೀಗ ಕಾರ್ಮಿಕ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ವಸ್ತುಗಳು
ಭಾರತದಲ್ಲೇ ತಯಾರಾದರೆ  ಅವುಗಳ ಉಳಿಕೆಯಾಗುತ್ತದೆ . ನಿಮ್ಮ ಚಿಂತನೆಹೀಗಿರಲಿ. ನಿಮ್ಮ ನಿಮ್ಮ ರಾಜ್ಯಗಳಲ್ಲಿರುವ ಸಂಪ ನ್ಮೂಲಗಳ ಬಗ್ಗೆ ಸಮರ್ಪಕ
ತಿಳಿವಳಿಕೆಯನ್ನು ಮೂಡಿಸಿ, ಬಂಡವಾಳಶಾಹಿಗಳನ್ನು ಸೆಳೆಯಿರಿ. ಇದೇ ವೇಳೆ ಅಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಯೋಗದಲ್ಲಿ  ಭಾರತದಲ್ಲಿ ಹೂಡಿಕೆ
ಬಗ್ಗೆ ದುಂಡುಮೇಜಿನ ಸಭೆ ಏರ್ಪಡಿಸಲಾಗಿದೆ. ಇಲ್ಲಿ ನಿಮ್ಮಲ್ಲಿರುವ ಪ್ರಾದೇಶಿಕ ಬಲದ ಬಗ್ಗೆ ಅರಿವು
ಮೂಡಿಸಿ. ಆಂಧ್ರಪ್ರದೇಶದಂತಹ ರಾಜ್ಯ ಹೆಚ್ಚು ಬಂಡವಾಳಕೋರರನ್ನು ಸೆಳೆಯಬಹುದು.
ವಲ್ರ್ಡ್ ಬ್ಯಾಂಕ್ ರ್ಯಾಂಕ್ ಪಟ್ಟಿಯಲ್ಲಿ ವಿಶ್ವದಲ್ಲಿರುವ 189 ರಾಷ್ಟ್ರಗಳಲ್ಲಿ ಭಾರತವು 142ರಲ್ಲಿದೆ.ಇದನ್ನು ಇನ್ನು 2 ವರ್ಷದಲ್ಲಿ ಟಾಪ್ 50ರೊಳಗೆ ತರುವ ಗುರಿಯನ್ನು ಹೊಂದಿದ್ದು, ಕೈಗಾರಿಕಾ ನೀತಿವಿಭಾಗದಲ್ಲಿ ಒಂದಷ್ಟು ಬದಲಾವಣೆ ತರುವ ಬಗ್ಗೆ ಚಿಂತನೆ ನಡೆಸಿದೆ. ಜತೆಗೆ ವ್ಯಾಪಾರ ವೃದ್ಧಿಗೆ ಸಹಕಾರವಾಗುವಂತೆ ಪೂರಕ ವಾತಾವರಣ ನಿರ್ಮಾಣಕ್ಕೂ  ಮುಂದಾಗಿದೆ. ಇದರ ಜತೆಗೆಹೂಡಿಕೆದಾರರಿಗೆ ತೆರಿಗೆ ಮೇಲಿರುವ ಭಯವನ್ನು ಹೋಗಲಾಡಿಸಲು ತೆರಿಗೆ ವ್ಯವಸ್ಥೆಯಲ್ಲಿ ಸ್ಥಿರತೆ ಕಾಪಾಡುವ ಭರವಸೆಯನ್ನು ನೀಡಬೇಕು.

ಯಾರ್ಯಾರು   ಹೋಗ್ತಾರೆ...
ಭಾರತದಿಂದ ಜೇಟ್ಲಿ ನೇತೃತ್ವದಲ್ಲಿ ಇಂಧನ ಸಚಿವ ಪಿಯೂಶ್ ಘೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ  ಫಡ್ನವಿಸ್  ಆಂಧ್ರಪ್ರದೇಶ ಮುಖ್ಯಮಂತ್ರಿ
ಚಂದ್ರಬಾಬು ನಾಯ್ಡು, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅಮಿತಾಭ್ ಕಾಂತ್,ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣಿಯನ್ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com