ಬೆಂಗಳೂರಿನ ಜಿಪ್‌ಡಯಲ್ ಟ್ವಿಟರ್ ತೆಕ್ಕೆಗೆ

ಬೆಂಗಳೂರು ಮೂಲದ ಮಾರ್ಕೆಟಿಂಗ್ ಮತ್ತು ವಿಶ್ಲೇಷಣಾ ಸಂಸ್ಥೆ 'ಜಿಪ್ ಡಯಲ್‌' ಅನ್ನು ಸಾಮಾಜಿಕ...
ಬೆಂಗಳೂರಿನ ಜಿಪ್‌ಡಯಲ್ ಟ್ವಿಟರ್ ತೆಕ್ಕೆಗೆ

ನವದೆಹಲಿ: ಬೆಂಗಳೂರು ಮೂಲದ ಮಾರ್ಕೆಟಿಂಗ್ ಮತ್ತು ವಿಶ್ಲೇಷಣಾ ಸಂಸ್ಥೆ 'ಜಿಪ್ ಡಯಲ್‌' ಅನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ಖರೀದಿಸಿದೆ. 30 ರಿಂದ 40 ದಶಲಕ್ಷ ಡಾಲರ್‌ಗೆ ಈ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಹೇಳಲಾಗಿದೆ.

ಜಿಪ್‌ಡಯನ್ ಅನ್ನು 2010ರಲ್ಲಿ ವಲೆರಿ ವ್ಯಾಗನರ್ (ಸಿಇಒ), ಅಮಿಯಾ ಪಾಠಕ್ (ಸಿಇಒ) ಮತ್ತು ಸಂಜಯ್ ಸ್ವಾಮಿ (ಮುಖ್ಯಸ್ಥ ಹಾಗೂ ಹೂಡಿಕೆಗಾರ) ಸ್ಥಾಪಿಸಿದ್ದರು. ಇದೊಂದು ದೇಶದ ವಿಶಿಷ್ಟ 'ಮಿಸ್ ಕಾಲ್‌' ಮಾರ್ಕೆಟಿಂಗ್ ವೇದಿಕೆಯಾಗಿದೆ.

ಜಿಪ್ ಡಯಲ್‌ನ ನಂಬರ್‌ಗೆ ಕರೆ ಮಾಡಿದರೆ ಇಂಟರ್ನೆಟ್ ಸಂಪರ್ಕ ಇಲ್ಲದೆ ಮೊಬೈಲ್ ಗ್ರಾಹಕರು ತಮ್ಮ ನೆಚ್ಚಿನ ನಟರ ಜತೆಗೆ ಸಂಪರ್ಕದಲ್ಲಿರಬಹುದು, ಅವರ ವಾಯ್ಸ್ ಕಾಲ್ ಅನ್ನು ಆಲಿಸಬಹುದು. ಬಾಲಿವುಡ್ ನಟರಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ರಜನಿಕಾಂತ್ ಮತ್ತು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಂಥ ಧಾರ್ಮಿಕ ನಾಯಕರೂ ಜಿಪ್ ಡಯಲ್ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com