ಒಬಾಮಾ ಭಾರತ ಪ್ರವಾಸದ ದಿನಚರಿ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಪ್ರವಾಸಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ...
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾರತ ಪ್ರವಾಸಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಒಬಾಮಾ ಅವರ ಪ್ರವಾಸದ ವೇಳಾಪಟ್ಟಿ ಬಗ್ಗೆ ಎಲ್ಲರಲ್ಲೂ ಕುತೂಹಲ ಉಂಟಾಗಿದೆ.

ಒಬಾಮಾ ಅವರು ಎಲ್ಲೆಲ್ಲಿ ತಂಗಲಿದ್ದಾರೆ? ಎಲ್ಲಿ ಸಭೆ ನಡೆಸಲಿದ್ದಾರೆ? ಏನೆಲ್ಲಾ ಮಾತುಕತೆ ನಡೆಸಲಿದ್ದಾರೆ? ಮೂರು ದಿನಗಳ ಒಬಾಮಾ ಪ್ರವಾಸದಲ್ಲಿ ಎನೆಲ್ಲಾ ಮಾಡುತ್ತಾರೆ ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿವೆ. ಉಭಯ ನಾಯಕರು ಆರ್ಥಿಕ ಪ್ರಗತಿ, ರಕ್ಷಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದು, ದೇಶದ ಪ್ರಸ್ತುತ ಬೆಳವಣೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಬಾಮಾ ಭಾರತ ಪ್ರವಾಸ ಕುರಿತಂತೆ ಮಾಹಿತಿ ನೀಡಿರುವ ಅಮೆರಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಬೆನ್ ರೋಡ್ಸ್ ಅವರು, ಒಬಾಮಾ ಪ್ರವಾಸವು ಭಾರತೀಯರಿಗೆ ಅತೀ ಮುಖ್ಯ ಕ್ಷಣವಾಗಿದ್ದು, ಒಬಾಮ ಅವರನ್ನು ಮೊದಲ ಬಾರಿ ಅಮೆರಿಕ ಅಧ್ಯಕ್ಷರೊಬ್ಬರನ್ನು ಭಾರತಕ್ಕೆ ಆಹ್ವಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಭೂತಪೂರ್ವ ಹೆಜ್ಜೆಯೊಂದನ್ನು ಮುಂದಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ರೀತಿಯ ಆಹ್ವಾನಗಳು ಭಾರತ ಮತ್ತು ಅಮೆರಿಕ ಸೇರಿದಂತೆ ಇತರೆ ದೇಶಗಳಿಗೂ ಉತ್ತಮ ಸಂದೇಶಗಳನ್ನು ರವಾನಿಸುತ್ತದೆ. ಅಲ್ಲದೆ, ದೇಶ ದೇಶಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಸಂಬಂಧಗಳನ್ನು ವೃದ್ಧಿಸುತ್ತದೆ ಎಂದಿದ್ದಾರೆ.

ಒಬಾಮರ ಭಾರತ ಪ್ರವಾಸ ವೇಳಾಪಟ್ಟಿ ಇಂತಿದೆ

ಭಾರತ ಪ್ರವಾಸದ ವೇಳೆ ಒಬಾಮಾ ಜೊತೆಗೆ ಅಮೆರಿಕ ಅಲ್ಪ ಸಂಖ್ಯಾತರ ಸಚಿವೆ ನ್ಯಾನ್ಸಿ ಪೆಲೊಸಿ, ವೈದ್ಯ ಅಮಿ ಬೆರಾ,  ನ್ಯೂಯಾರ್ಕ್ ವಿದೇಶಾಂಗ ಸಚಿವ ಜೋಸೆಫ್ ಕ್ರೌಲಿ, ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಸ್‌ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಧ್ಯಕ್ಷ ಸುಸಾನ್ ಇ ರೈಸ್ ಮತ್ತು ಒಬಾಮಾ ಸಲಹೆಗಾರ ಜಾನ್ ಪೊಡೆಸ್ತಾ, ಅಮೆರಿಕ ವಿದೇಶಾಂಗ ಸಚಿವ ಮೈಕೆಲ್ ಫ್ರೊಮನ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

ಜ.25- ಭಾನುವಾರ ನವದೆಹಲಿ ವಿಮಾನ ನಿಲ್ದಾಣಕ್ಕೆ ಒಬಾಮಾ ಆಗಮನ. ನಂತರ ರಾಷ್ಟ್ರಪತಿ ಭವನದಿಂದ ರಾಜ್ ಘಾಟ್‌ಗೆ ಭೇಟಿ. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ. ದೇಶದ ಗಡಿ ವಿಚಾರ, ಆರ್ಥಿಕತೆ, ಹವಾಮಾನ ಬದಲಾವಣೆ, ಬಂಡವಾಳ, ರಕ್ಷಣೆ ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಾದೇಶಿಕ ಜಾಗತಿಕ ಸಮಸ್ಯೆಗಳ ಕುರಿತಾಗಿ ಹೈದರಾಬಾದ್‌ ಹೌಸ್ ನಲ್ಲಿ ಸಭೆ. ನಂತರ ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಭೋಜನ ಕೂಟ.

ಜ.26-ಸೋಮವಾರ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೊಂದಿಗೆ ಪರೇಡ್ ಮೈದಾನಕ್ಕೆ ಭೇಟಿ. ನಂತರ ಭಾರತ ಹಾಗೂ ಅಮೆರಿಕ ದೇಶದ ಎಲ್ಲಾ ವ್ಯವಹಾರಿಕ ನಾಯಕರೊಂದಿಗೆ ಚರ್ಚೆ.

ಜ.27- ಮಂಗಳವಾರ ಒಬಾಮಾ ಪ್ರವಾಸದ ಕೊನೆಯ ದಿನ ಭಾರತ ಮತ್ತು ಅಮೆರಿಕ ಭವಿಷ್ಯದ ಅಭಿವೃದ್ಧಿ ಕುರಿತಾಗಿ ಸಾರ್ವಜನಿಕ ಭಾಷಣ. ನಂತರ ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com