ಜಮಾತ್ ಉದ್ ದಾವಾ, ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಗೆ ಪಾಕ್ ನಿಷೇಧ

ಹಫೀಜ್ ಮುಹಮ್ಮದ್ ಸಯೀದ್
ಹಫೀಜ್ ಮುಹಮ್ಮದ್ ಸಯೀದ್

ಇಸ್ಲಾಮಾಬಾದ್: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದಾವಾ ಮತ್ತು ಅಫ್ಘಾನಿಸ್ತಾನ ಮೂಲದ ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಯನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿದೆ.

ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಈ ಹಿಂದೆ ಅನೇಕ ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು. ಇದೀಗ ಮತ್ತೇ ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಲಾಗಿದೆ.

ಜಮಾತ್ ಉದ್ ದಾವಾ ಉಗ್ರ ಸಂಘಟನೆಯನ್ನು ನಿಷೇಧಿಸಬೇಕು ಎಂದು ಭಾರತ ಮತ್ತು ಅಮೆರಿಕ ಪಾಕಿಸ್ತಾನವನ್ನು ಒತ್ತಾಯಿಸುತ್ತಾ ಬಂದಿದ್ದವು. ಇದಕ್ಕೆ ಮಣಿದಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಸರ್ಕಾರ ಹಫೀಜ್ ಸಯೀದ್ ಮುನ್ನಡೆಸುತ್ತಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯನ್ನು ನಿಷೇಧಿಸಿದೆ.

ಹಕ್ಕಾನಿ ನೆಟ್‌ವರ್ಕ್ ಉಗ್ರ ಸಂಘಟನೆಯನ್ನು ಜಲಾಲ್ಲುದೀನ್ ಹಕ್ಕಾಗಿ ಹುಟ್ಟು ಹಾಕಿದ್ದು, 2008ರಲ್ಲಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿ 58 ಜನರ ಸಾವಿಗೆ ಕಾರಣವಾಗಿತ್ತು. ಮತ್ತೆ ಈ ಸಂಘಟನೆ 2011ರಲ್ಲಿ ಯುಎಸ್ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿತ್ತು. ಅಲ್ಲದೆ ಅಫ್ಘಾನಿಸ್ತಾನದ ವಿವಿಧೆಡೆ ಬಾಂಬ್ ದಾಳಿಗಳನ್ನು ನಡೆಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com