ಮಹತ್ವದ ನಿರ್ಧಾರಗಳ ಅನುಷ್ಠಾನ: ಜೇಟ್ಲಿ

ವಿದೇಶಿ ಬಂಡವಾಳ ಹೂಡಿಕೆ, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ...
ಹಣಕಾಸು ಸಚಿವ ಅರುಣ್‌ಜೇಟ್ಲಿ
ಹಣಕಾಸು ಸಚಿವ ಅರುಣ್‌ಜೇಟ್ಲಿ

ದಾವೋಸ್: ವಿದೇಶಿ ಬಂಡವಾಳ ಹೂಡಿಕೆ, ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು, ನೀತಿ ನಿರೂಪಣೆಯಲ್ಲಿ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್ ಘೋಷಣೆಗಿಂತಲೂ ಈ ಕ್ರಮಗಳು ಹೆಚ್ಚು ಮಹತ್ವದ್ದು ಎಂದು ಹಣಕಾಸು ಸಚಿವ ಅರುಣ್‌ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಬಜೆಟ್ ನಮ್ಮ ಸರ್ಕಾರದ ಪಾಲಿಗೆ ಮಹತ್ವದ ಗಳಿಗೆ. ಅದೇ ರೀತಿ ಮುಂದಿನ 364 ದಿನಗಳೂ ಸರ್ಕಾರದ ಪಾಲಿಗೆ ಅಷ್ಟೇ ಮುಖ್ಯ. ಈ ರೀತಿ ಹೇಳು ಮೂಲಕ ನಾನು ಬಜೆಟ್ ಬಗ್ಗೆ ಜನ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಹುಸಿ ಮಾಡುತ್ತಿಲ್ಲ.

 ರೈಲ್ವೆ, ರಕ್ಷಣಾ ಕ್ಷೇತ್ರಗಳನ್ನು ವಿದೇಶಿ ಬಂಡವಾಳ ಹೂಡಿಕೆಗೆ ತೆರೆಯುವಂತೆ ಮಾಡುವುದು ಸಣ್ಣ ಮಾತಲ್ಲ, ಜಿಎಸ್‌ಟಿ ಅನುಷ್ಠಾನಕ್ಕೆ ಮುಂದಾಗುವುದು, ಅದಿರು ಕ್ಷೇತ್ರ, ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿ ತೆಗೆದುಕೊಂಡ ಉಪಕ್ರಮಗಳು ಸಾಮಾನ್ಯವಾದುದೇನಲ್ಲ. ನಮ್ಮ ಹಿಂದಿನ ಸರ್ಕಾರಗಳು ಈ ವಿಚಾರದಲ್ಲಿ ವಿಫಲವಾಗಿತ್ತು. ಆದರೆ, ನಾವು ದೇಶದ ಆರ್ಥಿಕ ಬೆಳವಣಿಗೆಯ ದೃಷ್ಠಿಯಿಂದ ಇದನ್ನೆಲ್ಲ ಬಜೆಟ್‌ಗೆ ಮೊದಲೇ ಮಾಡಿ ತೋರಿಸಿದ್ದೇವೆ ಎಂದಿದ್ದಾರೆ ಜೇಟ್ಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com