
ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯ ಶಾಂತಿ ಭೂಷಣ್ ನಂತರ ಇದೀಗ ಅವರ ಪುತ್ರ, ಆಪ್ ನಾಯಕ ಪ್ರಶಾಂತ್ ಭೂಷಣ್ ಅವರು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ತಿರುಗಿ ಬಿದಿದ್ದಾರೆ.
ಅಣ್ಣಾ ಹಜಾರೆ ಅವರ ಲೋಕಪಾಲ ಚಳವಳಿಯಿಂದಲೂ ಕೇಜ್ರಿವಾಲ್ ಜತೆ ಗುರುತಿಸಿಕೊಂಡಿರುವ ಪ್ರಶಾಂತ್ ಭೂಷಣ್ ಅವರು, ದೆಹಲಿ ವಿಧಾನಸಭೆ ಚುನಾವಣೆಗಾಗಿ ಅರವಿಂದ್ ಕೇಜ್ರಿವಾಲ್ ಅವರು ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪೈಕಿ 12 ಕಳಂಕಿತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಈ 12 ಕಳಂಕಿತ ಅಭ್ಯರ್ಥಿಗಳು ಇತ್ತೀಚೆಗಷ್ಟೆ ಆಮ್ ಆದ್ಮಿ ಪಕ್ಷ ಸೇರಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಬಂದ ಇವರ ವಿರುದ್ಧ ಆಕ್ರಮ ಆಸ್ತಿ ಗಳಿಕೆ ಹಾಗೂ ಭೂ ಕಬಳಿಕೆ ಸೇರಿದಂತೆ ಹಲವು ಪ್ರಕರಣಗಳಿವೆ. ಹೀಗಾಗಿ ಇವರನ್ನು ಪಕ್ಷದಿಂದ ಕೈ ಬಿಡಬೇಕು. ಇಲ್ಲದಿದ್ದರೆ ಪಕ್ಷದ ಇಮೇಜ್‌ಗೆ ಧಕ್ಕೆಯಾಗಲಿದೆ ಎಂದು ಪ್ರಶಾಂತ್ ಭೂಷಣ್ ಒತ್ತಾಯಿಸಿದ್ದಾರೆ.
ಭೂಷಣ್ ಬಿಡುಗಡೆ ಮಾಡಿರುವ ಕಳಂಕಿತ ಅಭ್ಯರ್ಥಿಗಳ ಪಟ್ಟಿ
ಗೋವರ್ಧನ್ ಸಿಂಗ್ (ಮೆಹರೌಲಿ ಕ್ಷೇತ್ರ), ರಾಜಿಂದರ್ ಸಿಂಗ್ (ಮುಂಡ್‌ಕಾ ಕ್ಷೇತ್ರ), ಭಾವನಾ ಗೌರ್ (ಪಾಲಂ ಕ್ಷೇತ್ರ), ಪ್ರಮೀಳಾ ಟೋಕಾಸ್ (ಆರ್ ಕೆ ಪುರಂ ಕ್ಷೇತ್ರ), ಕರ್ತಾರ್ ಸಿಂಗ್ ತನ್ವರ್ (ಛತ್ತರ್‌ಪುರ), ಸಹೀ ರಾಮ್ ಪೆಹಲ್ವಾನ್, ಅಜೇಶ್ ಯಾದವ್ (ಬದ್ಲಿà), ಶರದ್ ಚೌಹಾಣ್ (ನರೇಲಾ), ವೇದ ಪ್ರಕಾಶ್ (ಬವಾನಾ), ಹಾಜಿ ಯೂನುಸ್ (ಮುಸ್ತಾಫಾಬಾದ್), ಹಾಜಿ ಇಶ್ರಕ್ ಅಹ್ಮದ್ (ಸೀಲಂಪುರ).
Advertisement