
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‍ಚಂದ್ರ ಬೋಸ್ ಅವರ 118ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೋಸ್‍ಗೆ ಗೌರವ ಸಲ್ಲಿಸಿದ್ದಾರೆ.
ಬೋಸ್ ಅವರ ಧೈರ್ಯ ಮತ್ತು ದೇಶಭಕ್ತಿಯು ನಮಗೆಲ್ಲರಿಗೂ ಸ್ಪೂರ್ತಿ. ಅವರ ಸಂಘಟನೆ ಮತ್ತು ನಾಯಕತ್ವ ಕೌಶಲವು ವಿಶಿಷ್ಟವಾದದ್ದು. ಭಾರತದ ಹೆಮ್ಮೆಯ ಪುತ್ರನಿಗೆ ನನ್ನ ನಮನ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಶಿವಸೇನೆ ಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮದಿನವೂ ಶುಕ್ರವಾರವೇ ಆದ ಕಾರಣ ಅವರನ್ನೂ ಪ್ರಧಾನಿ ಸ್ಮರಿಸಿಕೊಂಡರು. ಠಾಕ್ರೆ ಅವರು ಜನರ ಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದೂ ಮೋದಿ ಹೇಳಿದ್ದಾರೆ.
Advertisement