

ಪಾಟ್ನಾ: ಬಿಹಾರದ ಜೆಡಿಯು ಮುಖಂಡ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ವೈಯಕ್ತಿಕ ಗುರಿಗೋಸ್ಕರ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದರು.
ಅವರು ಪಕ್ಷದ ವಿಜಯ ರಥದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ನಿತೀಶ್ ಪ್ರಧಾನಿಯಾಗಬೇಕು ಎಂದು ಆರ್‍ಜೆಡಿ ಮುಖ್ಯಸ್ಥ ಲಾಲು ಜತೆ ಕೈಜೋಡಿಸಿದ್ದಾರೆ. ಹಿರಿಯ ಸಮಾಜವಾದಿ ಹಾಗೂ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಗರಡಿಯಲ್ಲಿ ಬೆಳೆದ ಈ ಇಬ್ಬರು ನಾಯಕರು ಒಟ್ಟಾಗಿದ್ದರಲ್ಲಿ ಅರ್ಥವಿದೆ ಎಂದು ತಿಳಿದರೂ, ಠಾಕೂರ್ ಅವರ ವಿಚಾರಧಾರೆಗೆ ವಿರುದ್ಧವಾಗಿರುವ ಕಾಂಗ್ರೆಸ್ ಜತೆ ಕೈಜೋಡಿಸುತ್ತಿರುವುದು ಅವಕಾಶವಾದಿ ತನಕ್ಕೆ ಎಂದು ಹರಿಹಾಯ್ದಿದ್ದಾರೆ.