ಭಾರತದಲ್ಲಿ ಮಹಾತ್ಮ ಗಾಂಧಿ ನಿಷ್ಠೆ ಇನ್ನೂ ಜೀವಂತ: ಒಬಾಮಾ

ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಇಂದು ಗಾಂಧಿ ಸಮಾಧಿಯ ರಾಜ್‌ಘಾಟ್‌ಗೆ ಭೇಟಿ ಕೊಟ್ಟು ಅಲ್ಲಿನ ವಿಸಿಟರ್ಸ್ ಪುಸ್ತಕದಲ್ಲಿ ರಾಷ್ಟ್ರಪಿತ...
ಬರಾಕ್ ಒಬಾಮಾ
ಬರಾಕ್ ಒಬಾಮಾ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಇಂದು ಗಾಂಧಿ ಸಮಾಧಿಯ ರಾಜ್‌ಘಾಟ್‌ಗೆ ಭೇಟಿ ಕೊಟ್ಟು ಅಲ್ಲಿನ ವಿಸಿಟರ್ಸ್ ಪುಸ್ತಕದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಬಗೆಗಿನ ನಿಷ್ಟೆ ಭಾರತದಲ್ಲಿ ಇನ್ನೂ ಜೀವಂತವಾಗಿದೆ ಎಂದು ಬರೆದಿದ್ದಾರೆ.

ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬರಾಕ್ ಒಬಾಮಾ ಭಾನುವಾರ ಬೆಳಗ್ಗೆ ಭಾರತಕ್ಕೆ ಬಂದಿಳಿದ ಅವರು, ಮೌರ್ಯ ಶೆರಟಾನ್‌ನಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದ ಬಳಿಕ ರಾಜ್‌ಘಾಟ್‌ಗೆ ತೆರಳಿದ ಒಬಾಮಾ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಡಾ,ಮಾರ್ಟಿನ್ ಲೂಥರ್ ಕಿಂಗ್ ಜ್ಯೂ. ಹೇಳಿದ್ದ ಮಾತು ಇಂದು ನಿಜವಾಗಿದೆ. ಗಾಂಧಿ ನಿಷ್ಠೆ ಭಾರತದಲ್ಲಿನ್ನೂ ಜೀವಂತವಾಗಿದೆ. ಇದು ಇಡೀ ವಿಶ್ವಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದೆ. ಆ ನಿಟ್ಟಿನಲ್ಲಿ ನಾವು ಗಾಂಧಿಯವರ ಪ್ರೀತಿ ಮತ್ತು ಶಾಂತಿ ಸಂದೇಶದ ನಿಷ್ಠೆಯಲ್ಲಿ ಬದುಕಬೇಕಾಗಿದೆ. ಅದೇ ರೀತಿ ಎಲ್ಲಾ ಜನರು, ದೇಶಗಳೂ ಸಹ ಶಾಂತಿ ಮತ್ತು ಪ್ರೀತಿಯಿಂದ ಬಾಳಬೇಕು ಎಂದು ಒಬಾಮಾ ವಿಸಿಟರ್ಸ್ ಪುಸ್ತಕದಲ್ಲಿ ಬರೆದಿದ್ದಾರೆ.

ರಾಜ್ ಘಾಟ್ ಗೆ ಬರಾಕ್ ಒಬಾಮಾ ಅವರ 2ನೇ ಭೇಟಿಯಾಗಿದೆ. 2010ರ ನವೆಂಬರ್ 8ರಂದು ಭಾರತಕ್ಕೆ ಬರಾಕ್ ಭೇಟಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com