
ಜಮ್ಮು ಮತ್ತು ಕಾಶ್ಮೀರದ `ನಾದ್ರು ಕೆ ಗೂಲಾರ್ 'ನಿಂದ ಹಿಡಿದು ಕರ್ನಾಟಕದ ಕರಾವಳಿಯ `ಸಿಗಡಿ ಮೀನಿ'ನವರೆಗೆ ಎಲ್ಲ ರೀತಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳನ್ನು ಒಬಾಮಗಾಗಿ ಸಿದ್ಧಪಡಿಸಲಾಗಿತ್ತು.
`ಶತ್ವಾರ್ ಕಾ ಶೊರ್ಬಾ' ಸೂಪ್, ಗುಲಾಬ್ ಜಾಮೂನ್ ಮತ್ತು ಕ್ಯಾರೆಟ್ ಹಲ್ವಾ, ಹಣ್ಣುಗಳನ್ನು ಸಸ್ಯಾಹಾರಿ ಹಾಗೂ ಮಾಂಸಾಹಾರಿಗಳೆಲ್ಲರೂ ಸವಿದರು. ಭೋಜನದ ಸ್ಟಾರ್ಟರ್ ಆಗಿ ಮಾಂಸಾಹಾರಿಗಳಿಗೆ ಕರ್ನಾಟಕದ ಕರಾವಳಿಯ ಸಿಗಡಿ ಮೀನು (ಶ್ರಿಂಪ್ ಕರಾವಳಿ) ಹಾಗೂ ಮುಘಲ್ ಖಾದ್ಯವಾದ `ಮುರ್ಗ್ ನೀಝಾ ಕೆಬಾಬ್' ಒದಗಿಸಿದರೆ, ಸಸ್ಯಾಹಾರಿಗಳಿಗೆ `ಅನಾನಸ್ ಮತ್ತು ಪನೀರ್ ಕಬಾಬ್'(ಗ್ರಿಲ್ ಮಾಡಿರುವಂಥದ್ದು), `ನಾದ್ರು ಕೆ ಗೂಲಾರ್', ಗುಜರಾತ್ ಖಾದ್ಯ `ಕೇಲಾ ಮೇಠಿ ನು ಶಾಕ್' ಹಾಗೂ ಮಿಶ್ರ ತರಕಾರಿಯ ಪಲ್ಯ, ಗುಜರಾತಿ `ಮಟರ್ ಪುಲಾವ್' ನೀಡಲಾಗಿತ್ತು. ಬಂಗಾಳಿ ಖಾದ್ಯ `ಮಹಿ ಸಾರ್ಸನ್' ಮತ್ತು `ಭುನಾ ಗೋಷ್ಟ್ ಬೋಟಿ' (ಟೊಮೆಟೋ ಮತ್ತು ಈರುಳ್ಳಿ ಮಸಾಲೆಯೊಂದಿಗೆ ಬೇಯಿಸಿದ ಕುರಿಮಾಂಸ)ದ ಸವಿಯನ್ನೂ ಮಾಂಸಾಹಾರಿಗಳು ಸವಿದರು. ಇದೇ ವೇಳೆ, ಮೆನುವಿನಲ್ಲಿ ದಕ್ಷಿಣ ಭಾರತದ ಕಾಪಿs ಮತ್ತು ಹರ್ಬಲ್ ಚಹಾ ಕೂಡ ಸೇರಿತ್ತು.
ಬರಾಕ್ ನಮಸ್ತೆ ಪರದೆ ಹಿಂದೆಯೇ ಇರಲಿ!
`ಚಾಯ ಪೆ ಚರ್ಚಾ' ವೇಳೆ ಹಾಗೂ ಹೈದರಾಬಾದ್ ಹೌಸ್‍ನ ಗಾರ್ಡನ್‍ನಲ್ಲಿ `ವಾಕ್ ದಿ ಟಾಕ್'ನಲ್ಲಿ ಚರ್ಚೆಯಾದ ವಿಚಾರವೇನು ಎನ್ನುವ ಕುತೂಹಲ ಪತ್ರಕರ್ತರದು. ಆದರೆ, ಈ ಕುತೂಹಲಕ್ಕೆ ಪ್ರಧಾನಿ ಮೋದಿ ತಣ್ಣೀರೆರಚಿದ್ದಾರೆ. ನಾವಿಬ್ಬರೂ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಆದರೆ, ಅವೆಲ್ಲವನ್ನೂ ಬಹಿರಂಗಪಡಿಸುವುದು ಅಸಾಧ್ಯ.
ಕೆಲವು ಪರದೆಯ ಹಿಂದೆಯೇ ಇರಲಿ ಬಿಡಿ ಎಂದು ಉತ್ತರಿಸಿದ್ದಾರೆ ಮೋದಿ. ಇನ್ನು ಒಬಾಮಾ ಅವರಿಂದಲೂ ಬಂದದ್ದು ನಕಾರಾತ್ಮಕ ಉತ್ತರವೇ! ಈ ವಿಚಾರದ ಬಗ್ಗೆ ಅವರೂ ಮೋದಿ ಬೆಂಬಲಕ್ಕೆ ನಿಂತರು. ಮೋದಿ ಹೇಳಿದ್ದು ಸರಿ ಎಂದರು. ಆದರೆ, ತಮ್ಮ ವೈಯಕ್ತಿಕ ಮಾತುಕತೆ ವೇಳೆ ನಾವು ಎಷ್ಟುಗಂಟೆ ನಿದ್ದೆ ಮಾಡುತ್ತೇವೆ ಎನ್ನುವ ಕುರಿತು ವಿಚಾರಿಸುತ್ತೇವೆ ಎಂದು ಒಬಾಮ ಹೇಳಿದ್ದಾರೆ. ಈ ವೇಳೆ ಮೋದಿ ಅವರು ತಮಗಿಂತ ಒಂದು ಗಂಟೆ ಕಡಿಮೆ ನಿದ್ದೆ ಮಾಡುತ್ತಿರುವ ವಿಚಾರ ಗೊತ್ತಾಯ್ತಂತೆ! ಮೋದಿ ಈಗ ಹೊಸ ಪ್ರಧಾನಿ. ಆರು ವರ್ಷ ಅವರು ಇದೇ ಕುರ್ಚಿಯಲ್ಲಿದ್ದರೆ ಅವರಿಗೆ ನಿದ್ದೆ ಮಾಡಲು ಇನ್ನೂ ಒಂದು ಗಂಟೆ ಹೆಚ್ಚುವರಿ ಸಮಯ ಸಿಗಬಹುದು ಎಂದು ಒಬಾಮ ಚಟಾಕಿ ಹಾರಿಸಿದ್ದಾರೆ.
ಮೋದಿ ಹೇಳಿದ್ದು
ಎರಡೂ ದೇಶಗಳ ನಡುವಿನ ಸಂಬಂಧ ಕಾಗದದ ಮೇಲಿನ ಅಲ್ಪವಿರಾಮವನ್ನು ಅವಲಂಬಿಸಿರುವುದಿಲ್ಲ. ಬದಲಾಗಿ ಎರಡೂ ದೇಶಗಳ ನಾಯಕರ ನಡುವಿನ ಸಂಬಂಧ ಹಾಗೂ ಹೊಂದಾಣಿಕೆಯನ್ನು. ಕ್ಯಾಮೆರಾದಿಂದ ನಾವು ದೂರವಿದ್ದಾಗ ಪರಸ್ಪರ ಅನೌಪಚಾರಿಕವಾಗಿ ಮಾತನಾಡುತ್ತೇವೆ. ನಮ್ಮನ್ನು ನಾವು ಪರಸ್ಪರ ಚೆನ್ನಾಗಿ ಅರಿತಿದ್ದೇವೆ. ಬರಾಕ್ ಹಾಗೂ ನಾನು ಗೆಳೆತನ ಬೆಳೆಸಿಕೊಂಡಿದ್ದೇವೆ.
ಈ ಮುಕ್ತ ಮನಸ್ಥಿತಿಯಿಂದಾಗಿ ನಾವು ಫೋನ್ ಮೂಲಕ ಆರಾಮವಾಗಿ ಜೋಕ್‍ಗಳನ್ನು ಹಂಚಿಕೊಳ್ಳುತೇವೆ, ನಗುತ್ತೇವೆ. ಚರಕ ಕೊಟ್ರು ರಾಷ್ಟ್ರಪಿತನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಒಬಾಮ ಅವರಿಗೆ ಗಾಂಧೀ ಸ್ಮಾರಕದ ಅಧಿಕಾರಿಗಳು ಗಾಂಧೀಜಿ ಅವರ `ಚರಕ'ದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಒಬಾಮ ಅವರು ತಮ್ಮ ಭೇಟಿಯ ನೆನಪಿಗಾಗಿ ಸಂಪ್ರದಾಯದಂತೆ ರಾಜ್‍ಘಾಟ್‍ನಲ್ಲಿ ಅಶ್ವತ್ಥ ಗಿಡವೊಂದನ್ನೂ ನೆಟ್ಟರು.
Advertisement