ಭಾರತೀಯ ಸೇನೆಯಿಂದ ರಕ್ತದಾನ ಶಿಬಿರ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಸೇನೆಯ ನೂರಾರು ಯೋಧರು..
ಭಾರತೀಯ ಸೇನೆಯ ರಕ್ತದಾನ ಶಿಬಿರ (ಸಂಗ್ರಹ ಚಿತ್ರ)
ಭಾರತೀಯ ಸೇನೆಯ ರಕ್ತದಾನ ಶಿಬಿರ (ಸಂಗ್ರಹ ಚಿತ್ರ)

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಸೇನೆಯ ನೂರಾರು ಯೋಧರು ಮತ್ತು ಅಧಿಕಾರಿಗಳು ರಕ್ತಾದಾನದಲ್ಲಿ ಪಾಲ್ಗೊಂಡಿದ್ದಾರೆ.

ಸಾದಾಕಾಲ ಉಗ್ರರ ದಾಳಿಗೆ ತುತ್ತಾಗುವ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ಹಮ್ಮಿಕೊಂಡಿರುವ ಈ ಸಮಾಜಸೇವಾ ಕಾರ್ಯ ಸಾರ್ವಜನಿಕರಿಂದ ಶ್ಲಾಘನೆಗೆ ಒಳಪಟ್ಟಿದ್ದು, ಸಾರ್ವಜನಿಕ ವಲಯದಿಂದಲೂ ಸಾಕಷ್ಟು ಬೆಂಬಲ ದೊರೆತಿದೆ. ಕೇವಲ ಸೈನಿಕರು ಮಾತ್ರವಲ್ಲದೆ ಶ್ರೀನಗರದ ನೂರಾರು ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಗಡಿಯಲ್ಲಿ ಆಗಾಗ್ಗೆ ಉಂಟಾಗುವ ಗುಂಡಿನ ಚಕಮಕಿಯಲ್ಲಿ ಹಲವು ಯೋಧರು ಮತ್ತು ಗಡಿ ಗ್ರಾಮಗಳ ನಾಗರೀಕರು ಗಾಯಗೊಳ್ಳುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಗಾಯಾಳುಗಳಿಗೆ ರಕ್ತದ ಕೊರತೆ ಎದುರಾಗಿ ಹಲವು ಸಂದರ್ಭಗಳಲ್ಲಿ ಅವರು ಸಾವಿಗೀಡಾಗುತ್ತಾರೆ.

ಈಗ್ಗೆ ಕಳೆದ ಸೆಪ್ಟಂಬರ್‌ನಲ್ಲಿ ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರವಾಹದ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದ ರಕ್ತದ ಕೊರತೆ ಎದುರಾಗಿತ್ತು. ಆಗ ಇದೇ ಸೇನಾ ಅಸ್ಪತ್ರೆಯಿಂದ ರಕ್ತವನ್ನು ಸರಬರಾಜು ಮಾಡಲಾಗಿತ್ತು. ಭಾರತೀಯ ಸೇನೆ ಹಲವು ವರ್ಷಗಳಿಂದ ಗಡಿ ರಾಜ್ಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಪ್ರಸ್ತುತ ಶಿಬಿರವು 7ನೇ ವಾರ್ಷಿಕ ರಕ್ತದಾನ ಶಿಬಿರವಾಗಿದೆ.

ಆರಂಭದಿಂದಲೂ ಸೇನೆಯ ಈ ರಕ್ತದಾನ ಶಿಬಿರಕ್ಕೆ ಸಾರ್ವಜನಿಕ ವಲಯದಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಾ ಬಂದಿದೆ. ಇದೇ ಜನವರಿ 12ರಂದು ಕೂಡ ಸೇನೆಯು ಬದ್‌ಗಾಮ್ ಜಿಲ್ಲೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com