ರಾಜಸ್ಥಾನದಲ್ಲಿ ಮಿಗ್ 27 ಯುದ್ಧ ವಿಮಾನ ಪತನ

ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್ 27 ಲಘು ಯುದ್ಧವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಇಬ್ಬರು ಪೈಲಟ್‌ಗಳು..
ಮಿಗ್ 27 ವಿಮಾನ ಪತನ ದೃಶ್ಯ (ಸಂಗ್ರಹ ಚಿತ್ರ)
ಮಿಗ್ 27 ವಿಮಾನ ಪತನ ದೃಶ್ಯ (ಸಂಗ್ರಹ ಚಿತ್ರ)

ಬಾರ್ಮರ್: ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಮಿಗ್ 27 ಲಘು ಯುದ್ಧವಿಮಾನ ಪತನವಾಗಿದ್ದು, ಅದೃಷ್ಟವಶಾತ್ ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಸ್ಥಾನದ ಬಾರ್ಮರ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೈಲಟ್‌ಗಳ ನಿಯಂತ್ರಣ ಕಳೆದುಕೊಂಡ ವಿಮಾನ ನೇರವಾಗಿ ಬೈಕ್ ಸವಾರನ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ವಿಮಾನದ  ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ತರಚು ಗಾಯಗಳು ಮತ್ತು ಸುಟ್ಟ ಗಾಯಗಳಾಗಿವೆ. ಪ್ರಸ್ತುತ ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಾರ್ಮರ್ ನಿವಾಸಿದಾಯ ಲೂನ್ ಸಿಂಗ್ ಎಂಬಾತ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲು ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಆಶ್ಚರ್ಯಕರ ರೀತಿಯಲ್ಲಿ ಲೂನ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೋಧ್‌ಪುರದ ಸೇನಾ ಕ್ಯಾಂಪ್‌ನಿಂದ ಹೊರಟಿದ್ದ ಮಿಗ್ 27 ಲಘು ಯುದ್ಧ ವಿಮಾನವು ಉತ್ತರಲೈನತ್ತ ಪ್ರಯಾಣ ಆರಂಭಿಸಿತ್ತು.

ಮಾರ್ಗ ಮಧ್ಯೆ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ವಿಮಾನವು ಪತನವಾಗುವ ವಿಚಾರ ತಿಳಿದ ಇಬ್ಬರು ಪೈಲಟ್‌ಗಳು ವಿಮಾನ ಪತನವಾಗುವ ಮುನ್ನವೇ ಹೊರಗೆ ಜಿಗಿದಿದ್ದಾರೆ. ಅಲ್ಲದೆ ವಿಮಾನ ಪತನವಾದ ಸ್ಥಳದಿಂದ ಸುಮಾರು 4 ಕಿ.ಮೀ ದೂರದಲ್ಲಿ ಪೈಲಟ್‌ಗಳು ಪಾರಾಚ್ಯೂಟ್‌ನಿಂದಾಗಿ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ವಾಯುಸೇನಾ ಅಧಿಕಾರಿಗಳು ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಈಗಾಗಲೇ ವಿಮಾನದ ಇಬ್ಬರು ಪೈಲಟ್‌ಗಳ ವಿಚಾರಣೆಗೆ ಐಎಎಫ್ ಮುಂದಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಾಯು ಸೇನಾ ಅಧಿಕಾರಿಗಳು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com