ಸಂಸತ್‍ನಲ್ಲಿ ಅಣು ಒಪ್ಪಂದ ಮಾಹಿತಿಗೆ ಕಾಂಗ್ರೆಸ್ ಪಟ್ಟು

ಭಾರತ ಮತ್ತು ಅಮೆರಿಕ ನಡುವೆ ನಡೆದ ನಾಗರಿಕ ಪರಮಾಣು ಒಪ್ಪಂದದ ವಿಷಯವನ್ನು ಮುಂಬರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಶ್ನಿಸಲಿದೆ...
ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ (ಸಂಗ್ರಹ ಚಿತ್ರ)
ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ (ಸಂಗ್ರಹ ಚಿತ್ರ)
Updated on

ನವದೆಹಲಿ: ಭಾರತ ಮತ್ತು ಅಮೆರಿಕ  ನಡುವೆ ನಡೆದ ನಾಗರಿಕ ಪರಮಾಣು ಒಪ್ಪಂದದ ವಿಷಯವನ್ನು ಮುಂಬರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಶ್ನಿಸಲಿದೆ.

ಅಲ್ಲದೆ, ಏಳು ವರ್ಷಗಳ ಹಿಂದೆ ತಡೆಯಲ್ಪಟ್ಟಿದ್ದ ಈ ಒಪ್ಪಂದದ ಪರಿಹಾರಕ್ಕೆ ಕೊಟ್ಟ ಭರವಸೆ ಬಗ್ಗೆಯೂ ಮಾಹಿತಿ ನೀಡುವಂತೆ ಆಗ್ರಹಿಸಲಿದೆ. ಅಣು ವಿಷಯವಾಗಿ ಎರಡೂ ದೇಶಗಳ ಮಧ್ಯೆ ನಡೆದ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರ ಅಸ್ಪಷ್ಟ ಮಾಹಿತಿ ನೀಡಿದೆ.

ಬರಾಕ್ ಭೇಟಿ ವೇಳೆ ಕೇವಲ ಒಪ್ಪಂದದ ಬಗ್ಗೆ ಘೋಷಣೆಯನ್ನಷ್ಟೇ ಮಾಡಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಪಟ್ಟುಹಿಡಿಯಲಿದೆ ಎಂದು ಮೂಲಗಳು ಹೇಳಿವೆ. ತಮ್ಮ ಪಕ್ಷ ಆಡಳಿತದಲ್ಲಿರುವಾಗಲೇ ಒಪ್ಪಂದದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ ಕಾಂಗ್ರೆಸ್ ಈ ಒಪ್ಪಂದವನ್ನು ವಿರೋಧಿಸುವುದಿಲ್ಲ.

ಆದರೆ, ಆಗ ಇದನ್ನು ವಿರೋಧಿಸಿದ್ದ ಬಿಜೆಪಿಯು ಈಗ ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದಲ್ಲದೆ, ವಾಣಿಜ್ಯ ಘಟಕದ ಬಗ್ಗೆ ಆದ ಒಪ್ಪಂದ, ಹಣಕಾಸಿನ ಬಾಧ್ಯತೆಗಳ ಬಗ್ಗೆ ವಿಧಿಸಿರುವ ಷರತ್ತು ಹಾಗೂ ಪರಿಹಾರ ಭಾಗಗಳ ಬಗ್ಗೆ ಸಮರ್ಪಕ ಮಾಹಿತಿ ಬೇಕು. ಇದುವರೆಗೂ ನಮಗೆ ಈ ಬಗ್ಗೆ ಮಾಡಿಕೊಂಡ ಒಡಂಬಡಿಕೆಯ ಪ್ರತಿ ಕೈ ತಲುಪಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಸರ್ಕಾರ ಮಾಹಿತಿಯನ್ನು ಅಸ್ಪಷ್ಟವಾಗಿ ನೀಡಿದೆ. ಇವುಗಳ ಬಗ್ಗೆ ಯಾರಿಗೂ ತಿಳಿಸಿಲ್ಲವಾದ್ದರಿಂದ ಸಂಸತ್‍ನಲ್ಲಿ ಮಾಹಿತಿ ಬಹಿರಂಗಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com