
ನವದೆಹಲಿ/ಶ್ರೀನಗರ: ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಕೊನೆಗೂ ಸರ್ಕಾರ ರಚನೆಯಾಗಲಿದೆಯೇ? ಬುಧವಾರ ತಡರಾತ್ರಿ ಅಂಥ ಬೆಳವಣಿಗೆ ಬಗ್ಗೆ ಸೂಚನೆಗಳು ಲಭಿಸಿವೆ.
ತಡ ರಾತ್ರಿ ಪ್ರಧಾನಮಂತ್ರಿ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್‍ರನ್ನು ಶ್ರೀನಗರಕ್ಕೆ ಕಳುಹಿಸಿಕೊಟ್ಟಿದೆ ಬಿಜೆಪಿ ವರಿಷ್ಠ ಮಂಡಳಿ.
ಅದಕ್ಕೆ ಪೂರಕವಾಗಿ ಬುಧವಾರ ಬಿಜೆಪಿ ನಾಯಕ ರಾಮ್ ಮಾಧವ್, ರಾಜ್ಯಪಾಲ ಎನ್.ಎನ್.ವೋಹ್ರಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪಿಡಿಪಿ ವಕ್ತಾರ ನಯೀಮ್ ಖಾನ್ ಕೂಡ ಪಿಡಿಪಿ ಮತ್ತು ಬಿಜೆಪಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮದನ್ವಯ ಸರ್ಕಾರ ರಚಿಸಲು ಅವಕಾಶ ಉಂಟು ಎಂದು ಹೇಳಿದ್ದರು.
Advertisement