ಸಂಜೆಯೊಳಗೆ ಲೇಡಿ ಬಾಂಬರ್ ಬಿಡಿ: ಇಸಿಸ್ ಎಚ್ಚರಿಕೆ

ಮಹಿಳಾ ಬಾಂಬರ್ ಳನ್ನು ಸಂಜೆಯೊಳಗೆ ಬಿಡುಗಡೆ ಮಾಡಬೇಕು ಇಲ್ಲವಾದರೆ ತಮ್ಮ ಬಳಿ ಇರುವ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಇಸ್ಲಾಮಿಕ್ ಸ್ಟೇಟ್..
ಇಸಿಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
ಇಸಿಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)

ಜೋರ್ಡಾನ್: ಮಹಿಳಾ ಬಾಂಬರ್ ಳನ್ನು ಸಂಜೆಯೊಳಗೆ ಬಿಡುಗಡೆ ಮಾಡಬೇಕು ಇಲ್ಲವಾದರೆ ತಮ್ಮ ಬಳಿ ಇರುವ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿದೆ.

ಜೋರ್ಡಾನ್ ಸರ್ಕಾರವನ್ನು ಉದ್ದೇಶಿಸಿ ಇಸಿಸ್ ಮುಖಂಡರು ಮಾತನಾಡಿರುವ ಆಡಿಯೋ ಟೇಪ್ ಇಂದು ದೊರೆತಿದ್ದು, ಟೇಪ್ ನಲ್ಲಿ 2005ರ ಜೋರ್ಡಾನ್ ಆತ್ಮಹತ್ಯಾ ಬಾಂಬ್ ದಾಳಿ ವೇಳೆ ಜೀವಂತ ಸೆರೆಸಿಕ್ಕ ಮಹಿಳಾ ಬಾಂಬರ್ ಸಜಿದಾ ಆಲ್ ರಿಸ್ವಾಯಿ ಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ತಮ್ಮ ಬಳಿ ಒತ್ತೆಯಾಳುಗಳಾಗಿರುವ ಜಪಾನ್ ದೇಶದ ಪತ್ರಕರ್ತೆ ಮತ್ತು ಜೋರ್ಡಾನ್ ವಾಯು ದಳಕ್ಕೆ ಸೇರಿದ ಪೈಲಟ್ ನನ್ನು ಕೊಲ್ಲುವುದಾಗಿ ಎಂದು ಇಸ್ಲಾಮಿಕ್ ಸ್ಟೇಟ್ ಎಚ್ಚರಿಕೆ ನೀಡಿದೆ.

ನಮಗೆ ಹಣ ಬೇಡ, ನಮ್ಮ ಸಹೋದರಿ ಬೇಕು, ಆಕೆಯನ್ನು ಬಿಡುಗಡೆ ಮಾಡದಿದ್ದರೆ ಇವರನ್ನು ಕೊಂದು ಹಾಕುತ್ತೇವೆ ಎಂದು ಇಸಿಸ್ ಬಿಡುಗಡೆ ಮಾಡಿರುವ ಟೇಪ್ ನಲ್ಲಿ ಹೇಳಲಾಗಿದೆ. ಜೋರ್ಡಾನ್ ನ ಪೈಲೆಟ್ ಮುಆತ್-ಆಲ್ ಮತ್ತು ಜಪಾನಿನ ಪತ್ರಕರ್ತೆ ಕೆಂಜಿ ಗೋಟೋ ಉಗ್ರರ ಕೈ ಗೆ ಸಿಕ್ಕಿ ಬಿದ್ದಿದ್ದು ಇದೀಗ ಪ್ರಾಣಾಪಾಯ ಎದುರಿಸುತ್ತಿದ್ದಾರೆ.

ಆತ್ಮಾಹುತಿ ಬಾಂಬರ್ ಸಾಜಿದಾ ಆಲ್ ರಿಸ್ವಾಯಿ 2005ರಲ್ಲಿ ತನ್ನ ಗಂಡನ ಜತೆಗೂಡಿ ಜೋರ್ಡನ್ ನಲ್ಲಿರುವ ರಾಡಿಸನ್ ಹೋಟೆಲ್ ಮೇಲೆ ದಾಳಿ ಮಾಡಿದ್ದಳು. ಅಲ್ ಖೈದಾ ಸಂಘಟನೆಯವರಾಗಿದ್ದ ಈ ದಂಪತಿ ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ದಾಳಿ ಮಾಡಿದ್ದರು. ಗಂಡ ತನ್ನನ್ನು ತಾನು ಸ್ಫೋಟಿಸಿಕೊಳ್ಳುತ್ತಿದ್ದಂತೆಯೇ ರಿಸ್ವಾಯಿ ಕೂಡ ಬಾಂಬ್ ಸ್ಫೋಟ ಮಾಡಲು ತಯಾರಿ ನಡೆಸಿದ್ದಳು. ಆದರೆ ರಿಸ್ವಾಯಿ ಸೊಂಟದಲ್ಲಿದ್ದ ಬಾಂಬ್ ಗಳು ಆಕ್ಷಣದಲ್ಲಿ ಸ್ಫೋಟಗೊಳ್ಳಲಿಲ್ಲ. ನಂತರ ಆಕೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿತ್ತು.

ಲೇಡಿ ಬಾಂಬರ್ ಬಿಡುಗಡೆ ಜೋರ್ಡಾನ್ ಸರ್ಕಾರ ಸಿದ್ಧ..?
ಉಗ್ರ ಸಂಘಟನೆ ಇಸಿಸ್ ಒತ್ತೆಯಾಳುಗಳಾಗಿರಿಸಿಕೊಂಡಿರುವ ಜಪಾನ್ ಪತ್ರಕರ್ತೆ ಮತ್ತು ಪೈಲಟ್ ಬಿಡುಗಡೆಗೊಳಿಸಲು ಜೋರ್ಡಾನ್ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಲ್ ಖೈದಾದ ಮಹಿಳಾ ಬಾಂಬರ್ ಸಾಜಿದಾ ಆಲ್ ರಿಸ್ವಾಯಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com