ನ್ಯಾಯಾಧೀಶರ ವಿರುದ್ಧ ಹೇಳಿಕೆ: ಸಿಪಿಎಂ ಮುಖಂಡನಿಗೆ ಜೈಲು ಶಿಕ್ಷೆ

ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ರಾಜ್ಯದ ಸಿಪಿಎಂ ಮುಖಂಡ ಪಿವಿ ಜಯರಾಜನ್ ಅವರಿಗೆ...
ಸಿಪಿಎಂ ಮುಖಂಡ ಪಿವಿ ಜಯರಾಜನ್ (ಸಂಗ್ರಹ ಚಿತ್ರ)
ಸಿಪಿಎಂ ಮುಖಂಡ ಪಿವಿ ಜಯರಾಜನ್ (ಸಂಗ್ರಹ ಚಿತ್ರ)
Updated on

ಕೊಚ್ಚಿ: ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇರಳ ರಾಜ್ಯದ ಸಿಪಿಎಂ ಮುಖಂಡ ಪಿವಿ ಜಯರಾಜನ್ ಅವರಿಗೆ ನ್ಯಾಯಾಲಯ 4 ವಾರಗಳ ಜೈಲು ಶಿಕ್ಷೆ ವಿಧಿಸಿದೆ.

2010ರ ಜೂನ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಸಿಪಿಎಂ ಮುಖಂಡ ಪಿವಿ ಜಯರಾಜನ್ ಅವರು ಹೈಕೋರ್ಟ್ ನ್ಯಾಯಾಧೀಶರೋರ್ವರನ್ನು ಅವಿವೇಕಿ ಎಂದು ಜರಿದಿದ್ದರು. ಜಯರಾಜನ್ ಅವರ ಸಾರ್ವಜನಿಕ ಸಭೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದರಿಂದ ಕುಪಿತರಾಗಿದ್ದ ಜಯರಾಜನ್ ಈ ರೀತಿ ಸಾರ್ವಜನಿಕ ಹೇಳಿಕೆ ನೀಡಿದ್ದರು.

ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದೂರು ಕೂಡ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ 2011 ನವೆಂಬರ್ ತಿಂಗಳನಲ್ಲಿ ಜಯರಾಜನ್‌ಗೆ 6 ತಿಂಗಳ ಸೆರವಾಸ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಜಯರಾಜನ್ ಅವರು, ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಸತತ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮಾತ್ರ ಕಡಿತಗೊಳಿಸಿದ್ದು, 4 ತಿಂಗಳ ಸೆರೆವಾಸ ಶಿಕ್ಷೆ ನೀಡಿದೆ. ಅಲ್ಲದೆ 2 ಸಾವಿರ ರು.ಗಳ ದಂಡ ಕೂಡ ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com