ಅಗ್ನಿ-5 ಕ್ಷಿಪಣಿ ಪರೀಕ್ಷಾ ಉಡಾವಣೆ ಯಶಸ್ವಿ

ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಅಗ್ನಿ-5 ಕ್ಷಿಪಣಿ (ಸಂಗ್ರಹ ಚಿತ್ರ)
ಅಗ್ನಿ-5 ಕ್ಷಿಪಣಿ (ಸಂಗ್ರಹ ಚಿತ್ರ)

ಬೆಂಗಳೂರು: ಡಿಆರ್‌ಡಿಓ ನಿರ್ಮಿತ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಅಗ್ನಿ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮಹತ್ವಾಕಾಂಕ್ಷಿಯ ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಜಿಗಿಯುವ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಅಗ್ನಿ-5 ಕ್ಷಿಪಣಿ ಪರೀಕ್ಷೆಯನ್ನು ಒಡಿಶಾ ಕರಾವಳಿಯ ವ್ಹೀಲರ್ ಐಲ್ಯಾಂಡ್‌ನಿಂದ ಇಂದು ಬೆಳಗ್ಗೆ ನಡೆಸಲಾಯಿತು. ಘನ ಇಂಧನ ಬಳಸಿ ಚಾಲನೆಗೊಳ್ಳುವ ಅಗ್ನಿ-5 ಕ್ಷಿಪಣಿಯನ್ನು ಇದೇ ಪ್ರಥಮ ಬಾರಿಗೆ ಕ್ಯಾನಿಸ್ಟರ್ ಮೂಲಕ ಉಡಾವಣೆ ಮಾಡಲಾಗಿದೆ.

ಅಗ್ನಿ -5 ಕ್ಷೀಪಣಿಯು 5,500 ಕಿಲೋ ಮೀಟರ್‌ಗಿಂತಲೂ ದೂರಕ್ಕೆ 1 ಟನ್‌ ಅಣ್ವಸ್ತ್ರ ಸಿಡಿತಲೆಯೊಂದಿಗೆ ಸಾಗುವ ಸಾಮರ್ಥ್ಯ ಹೊಂದಿದೆ. ಇಂದು ನಡೆದಿರುವ ಈ ಪರೀಕ್ಷೆಯು ಭಾರತದ ದೂರಗಾಮಿ ಕ್ಷಿಪಣಿ ಪ್ರಯೋಗದಲ್ಲಿ ಮೂರನೇ ಯಶಸ್ವೀ ಪರೀಕ್ಷೆಯಾಗಿದ್ದು , ಈ  ಹಿಂದೆ 2012 ರ ಎಪ್ರಿಲ್‌ 19 ಮತ್ತು 2013ರ ಸೆಪ್ಟಂಬರ್‌ 15 ರಂದು ಯಶಸ್ವೀಯಾಗಿ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆಸಲಾಗಿತ್ತು.

ಯೋಜನೆಯ ಎಲ್ಲ ನಿರೀಕ್ಷೆಗಳೂ ಈಡೇರಿದ್ದು, ಈ ಮೂಲಕ ಮತ್ತೊಂದು ಕನಸು ನನಸಾಗಿದೆ. ನಮ್ಮ ಪ್ರಕಾರ ಇದು ಶೇ. 200ರಷ್ಟು ಯಶಸ್ಸು ಗಳಿಸಿದ್ದು, ಇದಕ್ಕಿಂತ ಉತ್ತಮ ಪರಿಣಾಮವನ್ನು ನಾವು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಡಿಆರ್‌ಡಿಓ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com