ಸಿಇಟಿ: ಆನ್‍ಲೈನ್ ಅರ್ಜಿ ಸಲ್ಲಿಕೆ ಶುರು, ಮೊದಲ ದಿನ ಯಶಸ್ಸು

ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ...
ಸಿಇಟಿ: ಆನ್‍ಲೈನ್ ಅರ್ಜಿ ಸಲ್ಲಿಕೆ ಶುರು, ಮೊದಲ ದಿನ ಯಶಸ್ಸು

ಬೆಂಗಳೂರು: ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲ ದಿನ ಭಾಗಶಃ ಯಶಸ್ಸು ಕಂಡಿದೆ.

ಸುಮಾರು 1350 ವಿದ್ಯಾರ್ಥಿ ಗಳು ನೋಂದಣಿ ಮಾಡಿ ಕೊಂಡಿದ್ದು, 67 ವಿದ್ಯಾರ್ಥಿಗಳು ಅರ್ಜಿ ಭರಿಸಿ ಶುಲ್ಕವನ್ನು ತುಂಬಿದ್ದಾರೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹೊರತುಪಡಿಸಿದರೆ ಮತ್ಯಾವುದೇ ದೋಷಗಳು ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕಾಣಿಸಲಿಲ್ಲ. ಅದಲ್ಲದೇ ವಿದ್ಯಾರ್ಥಿಗಳಿಂದಲೂ ಅಂತಹ ದೂರುಗಳು ಬಂದಿಲ್ಲ. ಆದರೆ ಪೂರ್ವ ಸಿದ್ಧತಾ ಪರೀಕ್ಷೆ ತಯಾರಿಯಲ್ಲಿ ನಿರತರಾಗಿರುವುದರಿಂದ ಮೊದಲ ದಿನ ನಿರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಕ್ರಿಯೆಬಂದಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸರ್ವರ್‍ಗಳಲ್ಲಿಯೂ ಸಮಸ್ಯೆಯಾಗಿಲ್ಲ. ಆದರೆ ಅರ್ಜಿ ಸಲ್ಲಿಕೆ ಬಗ್ಗೆ ಪರಿಶೀಲನೆ ಮಾಡಿದಾಗ ಮೂರು ಪ್ರಮುಖ ದೋಷಗಳು ಕಂಡುಬಂದಿವೆ. ಪರೀಕ್ಷೆ ಬರೆಯುವ ಕೇಂದ್ರದ ಜಿಲ್ಲೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತಿದೆ. `ಪ್ಲೇಸ್ ವೇರ್ ಯು ವಿಷ್ ಟು ಅಪೀರ್ ಸಿಇಟಿ-2015' ಎನ್ನುವಲ್ಲಿ ಕ್ಲಿಕ್ ಮಾಡಿದರೆ ಜಿಲ್ಲೆಗಳು ಸರಿಯಾಗಿ ಬರುತ್ತಿಲ್ಲ.

ಇನ್ನು ಜಿಲ್ಲಾ ಕೇಂದ್ರಗಳು, ತಾಲೂಕು ಹಾಗೂ ಕಾಲೇಜುಗಳ ಹೆಸರು ಕೂಡ ಆನ್‍ಲೈನ್ನಲ್ಲಿಯೇ ಇಂಟಿಗ್ರೇಟ್ ಮಾಡುತ್ತಿರುವುದರಿಂದ ಅಂತರ್ಜಾಲ ವೇಗವಾಗಿರ ದಿದ್ದರೆ ಅರ್ಜಿ ತುಂಬುವುದು ಕಷ್ಟವಾಗುತ್ತಿದೆ. ಇದೆಲ್ಲದಕ್ಕಿಂತ ಪ್ರಮುಖವಾಗಿ `ಪಿಯುಸಿ ಸ್ಟೂಡೆಂಟ್ ನಂಬರ್'ನಲ್ಲಿ 13 ಅಂಕಿಯ ಗುರುತಿನ ಸಂಖ್ಯೆ ಹಾಕಬೇಕು. ಅಲ್ಲಿ ತಪ್ಪಾಗಿ ಅಥವಾ ಉದ್ದೇಶ ಪೂರ್ವಕವಾಗಿ ಬೇರೆ ಯಾವುದೋ ವಿದ್ಯಾರ್ಥಿಯ ಗುರುತಿನ ಸಂಖ್ಯೆ ಹಾಕಿದರೆ ನೈಜ ಅಭ್ಯರ್ಥಿಗೆ ಅರ್ಜಿ ಸಲ್ಲಿಸುವ ಅವಕಾಶ ತಪ್ಪುವ ಸಾಧ್ಯತೆಯಿದೆ. ಈ ಬಗ್ಗೆ ಪರೀಕ್ಷಾ ಪ್ರಾಧಿಕಾರವು ಪರಿಶೀಲನೆ ನಡೆಸುತ್ತಿದ್ದು, ಶನಿವಾರದೊಳಗೆ ಸಮಸ್ಯೆಗೆ ಪರಿಹಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com