ಭಾಷಣ ಟ್ವೀಟ್ ಮಾಡಿದ್ರು

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಗುಜರಾತ್‍ನಲ್ಲಿ ನಡೆಯುತ್ತಿರುವ...
ಗುಜರಾತ್‍ನಲ್ಲಿ ನಡೆಯುತ್ತಿರುವ ಇ-ಆಡಳಿತದ ಮೇಲಿನ ರಾಷ್ಟ್ರೀಯ ಸಮ್ಮೇಳನಕ್ಕೆ ದೆಹಲಿಯಲ್ಲಿ ಕುಳಿತು ಟ್ವಿಟರ್‍ನಲ್ಲಿ ಮಾತನಾಡಿದ  ಮೋದಿ
ಗುಜರಾತ್‍ನಲ್ಲಿ ನಡೆಯುತ್ತಿರುವ ಇ-ಆಡಳಿತದ ಮೇಲಿನ ರಾಷ್ಟ್ರೀಯ ಸಮ್ಮೇಳನಕ್ಕೆ ದೆಹಲಿಯಲ್ಲಿ ಕುಳಿತು ಟ್ವಿಟರ್‍ನಲ್ಲಿ ಮಾತನಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಗುಜರಾತ್‍ನಲ್ಲಿ ನಡೆಯುತ್ತಿರುವ ಇ-ಆಡಳಿತದ ಮೇಲಿನ ರಾಷ್ಟ್ರೀಯ ಸಮ್ಮೇಳನಕ್ಕೆ ದೆಹಲಿಯಲ್ಲೇ ಕುಳಿತು ಟ್ವಿಟರ್‍ನಲ್ಲಿ ಮೋದಿ ಮಾತನಾಡಿದ್ದಾರೆ. ಡಿಜಿಟಲ್ ಇಂಡಿಯಾ ಕನಸು ನನಸಿಗೆ ಇ-ಆಡಳಿತ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‍ನ ಗಾಂಧಿನಗರದಲ್ಲಿ ಸಮ್ಮೇಳನಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, 17 ಟ್ವೀಟ್ ಗಳನ್ನು ಮಾಡಿದ್ದಾರೆ.

ನಮಸ್ಕಾರ ಗೆಳೆಯರೇ, ಇ-ಆಡಳಿತದ ಬಗ್ಗೆ ನಡೆಯುತ್ತಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಟ್ವಿಟರ್ ಮೂಲಕ ಪಾಲ್ಗೊಳ್ಳಲು ತುಂಬಾ ಸಂತಸವಾಗುತ್ತಿದೆ. ನನಗೆ ಈ ಸಮ್ಮೇಳನದಲ್ಲಿ ಭಾಗಿಯಾಗಲಾಗುತ್ತಿಲ್ಲ ಎಂಬ ಬೇಸರವಿತ್ತು. ಆಗ ತಂತ್ರಜ್ಞಾನದ ಉಪಯೋಗಕ್ಕೆ ನಿರ್ಧರಿಸಿದೆ. ಹೀಗಾಗಿ ಈಗ ನಿಮ್ಮ ಜತೆ ಆ ಮೂಲಕ ಸಂವಹನ ಮಾಡುತ್ತಿದ್ದೇನೆ.

ಡಿಜಿಟಲ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು ತಂತ್ರಜ್ಞಾನದ ಬಳಕೆ ಬೇಕು. ಅದು ಬಲಶಾಲಿ ಸಮಾಜ ಮತ್ತು ಬೌದಿಟಛಿಕ ಆರ್ಥಿಕತೆಗೆ ಸಹಾಯ ಮಾಡುತ್ತದೆ. ಇ-ಆಡಳಿತದಿಂದ ಕೆಲಸ ಮತ್ತು ಪ್ರಗತಿಯ ಹೆಚ್ಚಳದ ಜತೆ ಹಲವಾರು ಅಡೆತಡೆಗಳ ನಿವಾರಣೆಯಾಗುತ್ತದೆ. ಈಗ ನಾವು ಇ-ಆಡಳಿತದ ಬಗ್ಗೆ ನೋಡುತ್ತಿದ್ದೇವೆ. ಈಗ ನಾವು `ಮೊಬೈಲ್ ಫಸ್ಟ್' ಬಗ್ಗೆ ಚಿಂತಿಸುವ ಸಮಯ ಬಂದಿದೆ. ಬಳಿಕವಷ್ಟೇ ಎಂ-ಗೌವರ್ನೆಸ್‍ಗೆ ಪ್ರಾತಿನಿಧ್ಯ ನೀಡೋಣ.

ತಂತ್ರಜ್ಞಾನ ಬಳಕೆಗೆ ಹೊಸ ಭಾಷ್ಯ ಕೊಟ್ಟ ಪ್ರಧಾನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com