ನಿಮಗೆ ಮೋದಿ ಅದೃಷ್ಟವಂತನಾದರೆ, ದುರದೃಷ್ಟವಂತರಿಗೆ ಯಾಕೆ ಮತ: ಮೋದಿ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿದಿದೆಯೋ ಇಲ್ಲವೋ?...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿದಿದೆಯೋ ಇಲ್ಲವೋ? ಆದರೆ ನನ್ನ ವಿರೋಧಿಗಳು ಮಾತ್ರ ಪೆಟ್ರೋಲ್ ಬೆಲೆ ಇಳಿಕೆಯಲ್ಲಿ ಮೋದಿ ಅವರ ಪ್ರಯತ್ನ ಏನು ಎಂದು ಪ್ರಶ್ನಿಸುತ್ತಾರೆ.

ಫೆಬ್ರವರಿ 7 ರಂದು ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ದ್ವಾರಕದಲ್ಲಿ ಬೃಹತ್ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನನ್ನ ಅವಧಿಯಲ್ಲಿ ಬೆಲೆ ಇಳಿಯೋಕೆ ಅದೃಷ್ಟ ಕಾರಣವಂತೆ. ಹಾಗಾದರೆ ನಾನು ಅದೃಷ್ಠವಂತನಾಗಿರುವುದು ದೇಶಕ್ಕೆ ಲಾಭ. ಹಾಗಗಿ ನಿಮಗೆ ಅದೃಷ್ಟವಂತ ಪ್ರಧಾನಿ ಬೇಕೋ? ದುರದೃಷ್ಟವಂತರ ಸರ್ಕಾರ ಬೇಕೋ? ನೀವೇ ಹೇಳಿ ಎಂದು ದೆಹಲಿ ಜನತೆಯನ್ನು ಪ್ರಶ್ನಿಸಿದ್ದಾರೆ.

ನನ್ನ ಸ್ವಂತಕ್ಕಾಗಿ ನಾನು ನಿಮ್ಮಲ್ಲಿ ಏನನ್ನೂ ಬೇಡುವುದಿಲ್ಲ. ದೆಹಲಿ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಎರಡೂ ರಾಜ್ಯಗಳಲ್ಲೂ ನೀರಿನ ಸಮಸ್ಯೆ ಇತ್ತು. ಆದರೆ ಅದಕ್ಕೆ ಪರಿಹಾರ ಸಿಕ್ಕಿಲ್ಲವಾಗಿತ್ತು. ಈಗ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಅದೇ ರೀತಿಯಲ್ಲಿ ದೆಹಲಿಗೆ ಸ್ಥಿರ ಸರ್ಕಾರ ಬೇಕು. ಈ ಬಾರಿ ನೀವು ಬಿಜೆಪಿಯನ್ನು ಗೆಲ್ಲಿಸಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com