ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೆಟ್ಟ ಭಾಷೆ ಬಳಸಬೇಡಿ: ಪ್ರಧಾನಿ ಮೋದಿ

ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿರುವ ತಮ್ಮ ಬೆಂಬಲಿಗರು ಸಕಾರಾತ್ಮವಾಗಿ ಇರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ...
Published on

ನವದೆಹಲಿ:ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿರುವ ತಮ್ಮ ಬೆಂಬಲಿಗರು ಸಕಾರಾತ್ಮವಾಗಿ ಇರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದೇ ರೀತಿ ಈ ಮಾಧ್ಯಮಗಳಲ್ಲಿ ನಿಂದನಾ ಶಬ್ದಗಳನ್ನು ಬಳಸದಂತೆಯೂ ಅವರು ನೆಟ್ ಪ್ರಿಯರನ್ನು ಒತ್ತಾಯಿಸಿದ್ದಾರೆ.

ಪ್ರಧಾನಿಯಾಗುವುದಕ್ಕೆ ಮೊದಲು, ಮೋದಿಯವರು, ಚುನಾವಣಾ ಪೂರ್ವ ಪ್ರಚಾರದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಸಾಕಷ್ಟು ಬಳಸಿಕೊಂಡಿದ್ದರು. ಪ್ರಧಾನಿಯಾದ ಬಳಿಕವಂತೂ ತಮ್ಮ ಸರ್ಕಾರದ ಯೋಜನೆಗಳ ಪ್ರಚಾರಕ್ಕೆ, ಅಭಿಯಾನಗಳಿಗೆ ಸಾಮಾಜಿಕ ಜಾಲತಾಣಗಳನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.  ಇಲ್ಲಿ ಯಾವುದೇ ನಿಂದನೆ, ಅವಹೇಳನ, ಕೆಟ್ಟ ಶಬ್ದಗಳನ್ನು ಬಳಸದಂತೆ ಅವರು ಕೋರಿಕೊಂಡರು. ನಿನ್ನೆ ಅವರು ತಮ್ಮ ನಿವಾಸದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಕೊಂಡಿರುವ ಸುಮಾರು 100 ಮಂದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ನನಗೆ ಬಂದ ನಿಂದನೆಗಳನ್ನೆಲ್ಲ ಒಟ್ಟು ಸೇರಿಸಿ ಅಚ್ಚು ಹಾಕಿಸಿದರೆ ಇಡೀ ತಾಜ್ ಮಹಲ್ ನ್ನು ಮುಚ್ಚಿಬಿಡಬಹುದು. ಋಣಾತ್ಮಕ ಟೀಕೆಗಳಿಗೆ ಕಠಿಣ ಪದಗಳಿಂದ ಪ್ರತಿಕ್ರಿಯಿಸಬಾರದು. ಹಾಗೆ ಮಾಡ ಹೊರಟರೆ ಸಾಮಾಜಿಕ ಜಾಲತಾಣವೆಂಬ ಮಾಧ್ಯಮ ಸತ್ತು ಹೋಗುತ್ತದೆ ಎಂದು ಪ್ರಧಾನಿ ಹೇಳಿದರು.

''ನನಗೆ ಟ್ವಿಟ್ಟರ್ ನಲ್ಲಿ ನೂರಾರು ಟೀಕೆಗಳು ಬರುತ್ತಿದ್ದರೂ, ಯಾವುದನ್ನೂ ತಡೆಹಿಡಿದಿಲ್ಲ ಎಂದು ಮೋದಿ ಹೇಳಿದರು. ಅವರಿಗೆ ಟ್ವಿಟ್ಟರ್ ನಲ್ಲಿ 13 ಮಿಲಿಯನ್ ಅನುಯಾಯಿಗಳಿದ್ದಾರೆ.
ಡಿಜಿಟಲ್ ಇಂಡಿಯಾ ಅಭಿಯಾನ ಉದ್ಘಾಟನೆಗೆ ಮುನ್ನ ಅವರು ಈ ಮಾತುಗಳನ್ನು ನಿನ್ನೆ ಹೇಳಿದರು. ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ 2019ನೇ ಇಸವಿ ವೇಳೆಗೆ 250 ಸಾವಿರ ಗ್ರಾಮಗಳನ್ನು ತಲುಪುವ ಗುರಿ ಹೊಂದಿದ್ದು, ದೇಶದ ಕುಗ್ರಾಮಗಳಿಗೂ ದೂರವಾಣಿ ಸಂಪರ್ಕ ಕಲ್ಪಿಸುವುದು ಅಭಿಯಾನದ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com