
ನವದೆಹಲಿ: ಕೇಂದ್ರ ಸರ್ಕಾರದ ಸೌಲಭ್ಯ ನೇರ ವರ್ಗಾವಣೆ (ಡಿಬಿಟಿ) ಸೌಲಭ್ಯ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಶ್ಲಾಘಿಸಿದ್ದಾರೆ.
ಡಿಬಿಟಿ ಯೋಜನೆ ದೇಶದ ಹಣಕಾಸು ವ್ಯವಸ್ಥೆ ಮೇಲೆ ಬೀರಿರುವ ಪರಿಣಾಮದ ಕುರಿತು ಪ್ರಸ್ತಾಪಿಸಿರುವ ಅವರು, ಈ ಯೋಜನೆಯಡಿ ಶೇ.25ರಷ್ಟು ಅಕ್ರಮ ಅಡುಗೆ ಅನಿಲ ಸಿಲಿಂಡರ್ ರದ್ದುಗೊಂಡಿದ್ದು ಕಳೆದ ಹಣಕಾಸು ಸಾಲಿನಲ್ಲಿ ರು.12 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆ ಹಣಕಾಸು ವ್ಯವಸ್ಥೆಗೆ ಮಾತ್ರ ಪ್ರಮುಖವಲ್ಲ, ಸರ್ಕಾರ ಇಡೀ ವಿಶ್ವವನ್ನು ಕ್ರಮಬದ್ಧಗೊಳಿಸಲಿದೆ ಎಂದು ಮಾನವ ಅಭಿವೃದ್ಧಿ ಕುರಿತ ಅಂತಾರಾಷ್ಟ್ರೀಯ ಕೇಂದ್ರ ಆಯೋಜಿಸಿದ್ದ ಸಭೆಯಲ್ಲಿ ಸುಬ್ರಮಣಿಯನ್ ಹೇಳಿದ್ದಾರೆ. ಸಬ್ಸಿಡಿ ವ್ಯವಸ್ಥೆಯಿಂದ ವರ್ಗಾವಣೆ ವ್ಯವಸ್ಥೆಗೆ ಪ್ರವೇಶಿಸುತ್ತಿದ್ದಂತೆ ವ್ಯವಸ್ಥೆ ಅತಿ ಹೆಚ್ಚು ಕ್ಷಮತೆಯಿಂದ ಕೆಲಸ ಮಾಡಲು ಸ್ವತಂತ್ರಗೊಳಿಸಿದಂತಾಗಲಿದೆ. ಹಾಗಾಗಿಯೇ ಡಿಬಿಟಿಯನ್ನು ಮೊದಲ ಹಂತದ ಸುಧಾರಣೆ ಎಂದು ಕರೆಯಲಾಗಿದೆ ಎಂದಿದ್ದಾರೆ.
Advertisement