ಮೋದಿಗೆ ಬಲಪಂಥೀಯ ಸಂಘಟನೆಗಳಿಂದ ಬೆದರಿಕೆ!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಷ್ಕರ್ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಂದ ಬೆದರಿಕೆ ಇದೆ. ಇದರ ಜತೆಗೆ, ಬಲಪಂಥೀಯ ಸಂಘಟನೆಗಳಿಂದಲೂ ಅವರಿಗೆ ಜೀವ ಬೆದರಿಕೆ ಇದೆಯಂತೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲಷ್ಕರ್ ಸೇರಿದಂತೆ ಹಲವು ಉಗ್ರ ಸಂಘಟನೆಗಳಿಂದ ಬೆದರಿಕೆ ಇದೆ. ಇದರ ಜತೆಗೆ, ಬಲಪಂಥೀಯ ಸಂಘಟನೆಗಳಿಂದಲೂ ಅವರಿಗೆ ಜೀವ  ಬೆದರಿಕೆ ಇದೆಯಂತೆ.

ಮೋದಿ ಮುಸ್ಲಿಮರನ್ನು ಓಲೈಕೆ ಮಾಡುತ್ತಿರುವುದೇ ಇದಕ್ಕೆ ಕಾರಣವಂತೆ. ಪ್ರಧಾನಿ ಈ ನಿಲುವು ಬಲಪಂಥೀಯ ಸಂಘಟನೆಗಳ ಕೋಪಕ್ಕೆ ಕಾರಣವಾಗಿದೆಯಂತೆ! ಹೀಗೆಂದು ಜೂ.21ರಂದು  ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಕೈಗೊಳ್ಳಬೇಕಾದ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಟಿಪ್ಪಣಿ ಸಿದ್ಧ ಮಾಡುವ ವೇಳೆ ಮುಸ್ಲಿಮರನ್ನು ಪ್ರಧಾನಿ ಹೆಚ್ಚಾಗಿ ಓಲೈಕೆ  ಮಾಡುತ್ತಿದ್ದಾರೆ. ಬಲಪಂಥೀಯ ಸಂಘಟನೆಗಳೂ ಅವರ ಮೇಲೆ ಕಣ್ಣಿಟ್ಟಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮೋದಿ ವಿರುದ್ಧ ಪ್ರಕರಣ ವಜಾ
2012ರ ಗುಜರಾತ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಪ್ರಧಾನಿಮೋದಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿದೆ. ಚುನಾವಣೆ ವೇಳೆ ಮೋದಿ ಸಲ್ಲಿಸಿರುವ ಪ್ರಮಾಣ ಪತ್ರ ಕಾನೂನು ಬದ್ಧವಾಗಿರಲಿಲ್ಲ ಎಂದು ದೂರು ದಾಖಲಾಗಿತ್ತು. ಈ ಆರೋಪದಲ್ಲಿ ಸತ್ಯಾಂಶವಿಲ್ಲ ಮತ್ತು ಅದನ್ನು ಪುಷ್ಟೀಕರಿಸುವ ಅಂಶಗಳಿಲ್ಲ  ಹೈಕೋರ್ಟ್ ಶುಕ್ರವಾರ ಆದೇಶ ನೀಡಿದೆ.

ಇದರ ಜತೆಗೆ ಒಂದು ವರ್ಷದ ಬಳಿಕ ದೂರು ಸಲ್ಲಿಸಲಾಗಿದೆ. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ  ಆದೇಶವನ್ನೂ ಹೈಕೋರ್ಟ್ ಒಪ್ಪಿಕೊಂಡಿಲ್ಲ. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದ ಬಳಿಕ ಯಾಕೆ ಅರ್ಜಿದಾರರು ಕೋರ್ಟ್ ಮೊರೆ ಹೋದರು ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದಿದೆ  ಕೋರ್ಟ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com