
ನವದೆಹಲಿ: ಐಸಿಸ್ ಉಗ್ರರ ಪರ ಸಿರಿಯಾದಲ್ಲಿ ಕಾದಾಡುತ್ತಿದ್ದ ಇಂಡಿಯನ್ ಮುಜಾಹಿದೀನ್ ಕಮಾಂಡರ್, ಭಾರತದಲ್ಲಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಮೊಹಮ್ಮದ್ ಬಡಾ ಸಾಜಿದ್ ಮೃತಪಟ್ಟಿದ್ದಾನೆ.
ಆನ್‍ಲೈನ್ ಜಿಹಾದಿಸ್ಟ್ ಮಾಧ್ಯಮಗಳಲ್ಲೊಂದಾದ ಇಸಬ್ ಮೀಡಿಯಾ ಈ ಸೂದ್ದಿಯನ್ನು ಪ್ರಕಟಿಸಿದೆ. ಉತ್ತರಪ್ರದೇಶದ ಸಂಜರ್ ಪುರದ ಸಾಜಿದ್(30) ಎನ್‍ಐಎಯ ವಾಂಟೆಡ್ ಪಟ್ಟಿಯಲ್ಲಿದ್ದಾತ. 2008ರಲ್ಲಿ ದೆಹಲಿ, ಅಹ್ಮದಾಬಾದ್ ಮತ್ತು ಜೈಪುರದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ 166 ಸಾವುಗಳಿಗೆ ಕಾರಣನಾಗಿದ್ದ.
ಸಾಜಿದ್ ಅಲ್ಲದೇ ಇನ್ನೂ ಇಬ್ಬರು ಸಿರಿಯಾ ಯುದ್ಧದಲ್ಲಿ ಹತ್ಯೆಗೀಡಾಗಿದ್ದಾರೆಂದು ಜಿಹಾದಿ ಮಾಧ್ಯಮವೇ ವರದಿ ಮಾಡಿದ್ದು, ಅಬು ತಾಲ್ಹಾ ಮತ್ತು ಅಬು ಮುಹಮ್ಮದ್ ಎಂಬ ಅವರ ಹುಸಿನಾಮ ಮಾತ್ರ ಬಹಿರಂಗಗೊಳಿಸ ಲಾಗಿದೆ. ಆದರೆ ಭಾರತೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.
Advertisement