ಪೇದೆಯನ್ನು ಉಗ್ರನೆಂದು ತಿಳಿದು ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ

ಕುಡಿದು ಅಮಲಿನಲ್ಲಿ ಕಚೇರಿಗೆ ನುಗ್ಗಿದ ಪೇದೆಯೊಬ್ಬನ ಮೇಲೆ ಆಲ್ ಇಂಡಿಯಾ ರೇಡಿಯೋ ಭದ್ರತಾ ಸಿಬ್ಬಂದಿಯೊಬ್ಬ ಗುಂಡು ಹಾರಿಸಿರುವ ಘಟನೆಯೊಂದು ದೆಹಲಿಯಲ್ಲಿ ಸೋಮವಾರ ನಡೆದಿದೆ...
ಪೇದೆಯನ್ನು ಉಗ್ರನೆಂದು ತಿಳಿದು ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ (ಸಾಂದರ್ಭಿಕ ಚಿತ್ರ)
ಪೇದೆಯನ್ನು ಉಗ್ರನೆಂದು ತಿಳಿದು ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ (ಸಾಂದರ್ಭಿಕ ಚಿತ್ರ)

ನವದೆಹಲಿ: ಕುಡಿದು ಅಮಲಿನಲ್ಲಿ ಕಚೇರಿಗೆ ನುಗ್ಗಿದ ಪೇದೆಯೊಬ್ಬನ ಮೇಲೆ ಆಲ್ ಇಂಡಿಯಾ ರೇಡಿಯೋ ಭದ್ರತಾ ಸಿಬ್ಬಂದಿಯೊಬ್ಬ ಗುಂಡು ಹಾರಿಸಿರುವ ಘಟನೆಯೊಂದು ದೆಹಲಿಯಲ್ಲಿ ಸೋಮವಾರ ನಡೆದಿದೆ.

ಅಂಕಿತ್ ಕುಮಾರ್ ದೆಹಲಿಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕುಡಿದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ದೆಹಲಿ ಆಲ್ ಇಂಡಿಯಾ ರೇಡಿಯೋ ಕಚೇರಿ ಬಳಿ ಕಾರಿನಲ್ಲಿ ಬಂದ ಅಂಕಿತ್ ಕುಮಾರ್, ಇದ್ದಕ್ಕಿದ್ದಂತೆ ಕಾರಿನಿಂದಲೇ ಕಚೇರಿಯ ಗೇಟ್ ನ್ನು ಹೊಡೆದುಕೊಂಡು ಮುಂದೆ ಬಂದಿದ್ದಾನೆ. ಈ ವೇಳೆ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಪೇದೆಯನ್ನು ಉಗ್ರನಿರಬಹುದೆಂಬ ಶಂಕೆಯಿಂದ ಭದ್ರತಾ ಸಿಬ್ಬಂದಿಗಳು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಇಂದು ಬೆಳಿಗಿನ ಜಾವ ಸುಮಾರು 3 ಗಂಟೆಗೆ ಸಂಭವಿಸಿತು. ಅಂಕಿತ್ ಕುಮಾರ್ ಕಾರು ಚಲಾಯಿಸುತ್ತಿರುವಾಗ ಆತನೊಂದಿಗೆ ಮತ್ತೊಬ್ಬ ಸ್ನೇಹಿತನೂ ಇದ್ದ. ಆಲ್ ಇಂಡಿಯಾ ರೇಡಿಯೋ ಭದ್ರತಾ ಸಿಬ್ಬಂದಿ ಗುಂಡು ಹಾರಿಸುವಾಗ ಸ್ಥಳದಲ್ಲಿ ನಾಗಾಲ್ಯಾಂಡ್ ಪೊಲೀಸರು ಇದ್ದರು. ಕುಡಿದ ಅಮಲಿನಲ್ಲಿದ್ದ ಅಂಕಿತ್ ಕುಮಾರ್ ಕಾರಿನಲ್ಲಿ ಬಂದು ಇದ್ದಕ್ಕಿದ್ದಂತೆ ಕಚೇರಿಯ ಗೇಟ್ ಹೊಡೆದು ಒಳನುಗ್ಗಿದ್ದಾನೆ. ಘಟನೆ ವೇಳೆ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತಿರುವುದು ಕಂಡು ಬಂದಿತು. ಹೀಗಾಗಿ ಈ ವ್ಯಕ್ತಿ ಯಾರು ಎಂಬುದು ತಿಳಿಯದೇ, ಭದ್ರತೆಯ ದೃಷ್ಟಿಯಿಂದ ಸಿಬ್ಬಂದಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಗುಂಡು ಅಂಕಿತ್ ಕುಮಾರ್ ಅವರ ಎಡಬುಜಕ್ಕೆ ಬಿದ್ದಿದ್ದು, ಗುಂಡು ಹಾರುತ್ತಿದ್ದಂತೆ ಆತನನ್ನು ಎಲ್ಎನ್ ಜೆ ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅಂಕಿತ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಪೇದೆ ಅಂಕಿತ್ ಕುಮಾರ್ ವಿರುದ್ಧ ತಿಮರ್ಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com