
ನವದೆಹಲಿ/ಭೋಪಾಲ್: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನನ್ನದೇನೂ ಅಭ್ಯಂತರ ಇಲ್ಲ. ಹೈಕೋರ್ಟ್ ಒಪ್ಪಿದರೆ ಪ್ರಕರಣವನ್ನು ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ಒಪ್ಪಿಸಲು ಸಿದ್ಧ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಈ ನಡುವೆ ಅವರು ಪತ್ರಕರ್ತ ಅಜಯ್ ಸಿಂಗ್ ಅಸಹಜ ಸಾವಿನ ಕುರಿತು ಹೈಕೋರ್ಟ್ ನೇತೃತ್ವ ದ ಎಸ್ ಐಟಿ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳುವುದಾಗಿ ಚೌಹಾಣ್ ಹೇಳಿದ್ದಾರೆ. ಈ ಸಂಬಂಧ ಅವರು ಎಸ್ ಐಟಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಏಮ್ಸ್ ನಲ್ಲಿ ಪರೀಕ್ಷೆ
ವ್ಯಾಪಂ ಹಗರಣದ ವರದಿ ಮಾಡಲು ಹೋಗಿ ಅನುಮಾನಾಸ್ಪದವಾಗಿ ಸಾವಿಗೀಡಾದ ಆಜ್ ತಕ್ ಪತ್ರಕರ್ತ ಅಕ್ಷಯ್ ಸಿಂಗ್ ಕರುಳಿನ ಭಾಗಗಳ ಪರೀಕ್ಷೆ ದೆಹಲಿಯ ಏಮ್ಸ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರವನ್ನು ಸ್ವತಹ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಖಚಿತಪಡಿಸಿದ್ದಾರೆ. ಅಕ್ಷಯ್ ಸಿಂಗ್ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸಾವಿನ ಕುರಿತು ತನಿಖೆ ನಡೆಸಬೇಕು, ಅವರ ಕರುಳಿನ ಭಾಗಗಳ ಪರೀಕ್ಷೆಯನ್ನು ಏಮ್ಸ್ ನಲ್ಲಿ ನಡೆಸಬೇಕೆಂದು ಅಕ್ಷಯ್ ಸಿಂಗ್ ಸಹೋದರಿ ಪಾಕ್ಷಿ ಸಿಂಗ್ ಆಗ್ರಹಿಸಿದ್ದರು. ಈ ಸಂಬಂಧ ಮುಖ್ಯಮಂತ್ರಿ ಚೌಹಾಣ್ ರಿಗೆ ಪತ್ರವನ್ನೂ ಬರೆದಿದ್ದರು. ಇದೇ ರೀತಿಯ ಬೇಡಿಕೆಯನ್ನು ಪ್ರತಿಪಕ್ಷಗಳೂ ಮುಂದಿಟ್ಟಿದ್ದವು.
ವೈದ್ಯ ಡಾ. ಶರ್ಮಾ, ಪತ್ರಕರ್ತ ಸಾವಿನ ಹಿನ್ನೆಲೆಯಲ್ಲಿ ಹಗರಣದ ಕುರಿತು ಸಿಬಿಐ ಅಥವಾ ಎಸ್ ಐಟಿ ತನಿಖೆ ಆಗಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ.
Advertisement