ಏರ್‍ಟೆಲ್ ಜೀರೋ ಓಕೆ, ಫೇಸ್‍ಬುಕ್.ಆರ್ಗ್ ಯಾಕೆ?

ಅಂತರ್ಜಾಲ ಸಮಾನತೆವಿವಾದ ಇನ್ನೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್ ) ಅಂಗಣದಲ್ಲಿರುವಾಗಲೇ...
ಏರ್‍ಟೆಲ್
ಏರ್‍ಟೆಲ್

ನವದೆಹಲಿ: ಅಂತರ್ಜಾಲ ಸಮಾನತೆವಿವಾದ ಇನ್ನೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್ ) ಅಂಗಣದಲ್ಲಿರುವಾಗಲೇ ದೂರಸಂಪರ್ಕ ಇಲಾ
ಖೆಯ ಸಮಿತಿಯೊಂದು ಏರ್‍ಟೆಲ್ ಜೀರೋ ಯೋಜನೆಗೆ ತನ್ನ ಒಪ್ಪಿಗೆ ಸೂಚಿಸಿದೆ. ಕೆಲವು ವೆಬ್‍ಸೈಟ್‍ಗಳನ್ನು ಮಾತ್ರ ಇಂಟರ್ನೆಟ್ ಶುಲ್ಕವಿಲ್ಲದೆ ಉಚಿತವಾಗಿ ಕೊಡುವ ಯೋಜನೆ ಇರುವ ಈ ಏರ್ ಟೆಲ್ ಜೀರೋ ಕೂಡಾ ಅಂತರ್ಜಾಲ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದು ಇದನ್ನು ಸಮಿತಿ ಬೆಂಬಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಅದಕ್ಕಿಂತ ಅಚ್ಚರಿಯೆಂದರೆ ಈ ಸಂಸ್ಥೆ ಅದೇ ಮಾದರಿಯ ಅಂತರ್ಜಾಲ ಸಮಾನತೆ ವಿರೋಧಿ  ಧೋರಣೆ ಇರುವ ಫೇಸ್‍ಬುಕ್ ಡಾಟ್ ಆರ್ಗ್ ಅನ್ನು ದೂರವಿಡಲು
ಶಿಫಾರಸು ಮಾಡಿದೆ. ಈ ಮೊದಲು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಟೆಲಿಕಾಂ ಇಲಾ ಖೆಯ ಒಂದು ಸಮಿತಿ ರಚಿಸಿ ನೆಟ್ ನ್ಯೂಟ್ರಲಿ ಟಿಯ ಬಗ್ಗೆ ತನ್ನ  ಅಭಿಪ್ರಾಯ ಹಾಗೂ ಶಿಫಾರಸು ನೀಡಬೇಕೆಂದು ಆದೇಶಿದ್ದರು. ಸಮಿತಿ ಕುಲಂಕುಷ ಪರಿಶೀಲನೆ ಮಾಡಿದ ನಂತರ ಫೇಸ್‍ಬುಕ್ ಡಾಟ್ ಆರ್ಗ್ ಅಂತರ್ಜಾಲ ಸಮಾನತೆ ನೀತಿಯನ್ನು ಉಲ್ಲಂಘಿ ಸುತ್ತಿದೆಯೆಂದೂ, ಏರ್ ಟೆಲ್  ಜೀರೋ ಅಂರ್ಜಾಲ ಸಮಾನತೆಗೆ ಪೂರಕವಾಗಿದೆಯೆಂದೂ  ವರದಿ ನೀಡಿದೆ. ಸಮಿತಿ ಈಗಾಗಲೇ ತನ್ನ ವರದಿಯವನ್ನು ಸಚಿವರಿಗೆ ಸಲ್ಲಿಸಿಯಾಗಿದ್ದು ಅಂತರ್ಜಾಲ ತಟಸ್ಥ ನೀತಿಯನ್ನು ಉಲ್ಲಂಘಿಸುವ ಟೆಲಿಕಾಂ ಸಂಸ್ಥೆಗಳಿಗೆ ದಂಡ ವಿಧಿಸಬೇಕೆಂದೂ ಸಲಹೆ ನೀಡಿದೆ. ಆದರೆ ತಮಗಿನ್ನೂ ಈ ಬಗ್ಗೆ ಮಾಹಿತಿ ಸಿಕ್ಕಿಲ್ಲದ ಕಾರಣ ಈಗಲೇ ಪ್ರತಿಕ್ರಿಯಿಸು ವುದಿಲ್ಲವೆಂದು ಫೇಸ್ ಬುಕ್ ಡಾಟ್ ಆರ್ಗ್ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com