ಕನಿಷ್ಠ ವೇತನ ರು. 160 ಪ್ರಸ್ತಾವನೆ'

ಕಂಪನಿ ಮುಚ್ಚಿದರೆ ಕಾರ್ಮಿಕರಿಗೆ ನೀಡುವ ಸೌಲಭ್ಯ ಹೆಚ್ಚಳ ಸೇರಿದಂತೆ ಕಾರ್ಮಿಕ ಕಾಯ್ದೆಗೆ ಹಲವು ಸುಧಾರಣೆಗಳು ತರಲು ಕೇಂದ್ರ ಕಾರ್ಮಿಕ ಸಚಿವಾಲಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದರಾಬಾದ್: ಕಂಪನಿ ಮುಚ್ಚಿದರೆ ಕಾರ್ಮಿಕರಿಗೆ ನೀಡುವ ಸೌಲಭ್ಯ ಹೆಚ್ಚಳ ಸೇರಿದಂತೆ ಕಾರ್ಮಿಕ ಕಾಯ್ದೆಗೆ ಹಲವು ಸುಧಾರಣೆಗಳು ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಮುಂದಾಗಿದೆ. ಇದೇ ಸಂದರ್ಭದಲ್ಲಿ ಕನಿಷ್ಠ ವೇತನವನ್ನು ದಿನಕ್ಕೆ ರು.160ಕ್ಕೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಮುಂದಿಟ್ಟಿದೆ.

ಕಾರ್ಮಿಕ ಕಾಯ್ದೆಯಲ್ಲಿನ ಹಲವಾರು ಕಾನೂನುಗಳನ್ನು 50 -60 ವರ್ಷಗಳ ಹಿಂದೆ ಮಾಡಿದ್ದಾಗಿವೆ. ಕಾರ್ಮಿಕ ಕಾಯ್ದೆಯನ್ನು 1925ರಲ್ಲಿ ಮಾಡಲಾಗಿದ್ದು ಇವೆಲ್ಲಕ್ಕೂ ಬದಲಾವಣೆ ತರುವ ಅಗತ್ಯವಿದೆ. ಅಂದರೆ ಅವುಗಳನ್ನು ಸರಳಗೊಳಿಬೇಕಾಗಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ಸಹಾಯಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

ಕಾರ್ಖಾನೆಗಳನ್ನು ಲಾಕ್‍ಔಟ್ ಮಾಡಿದರೆ ಸದ್ಯ ಕಾರ್ಮಿಕರು 15 ದಿನಗಳ ವೇತನ ಮಾತ್ರ ಪಡೆಯುತ್ತಿದ್ದಾರೆ. ಹೊಸ ಪ್ರಸ್ತಾವನೆಯಲ್ಲಿ 45 ದಿನಗಳಿಗೆ ಹೆಚ್ಚಿಸಲಾಗಿದೆ. ಯಾವುದೇ ಕಾರ್ಖಾನೆ ಮುಚ್ಚಿದಾಗಲೂ ಕಾರ್ಮಿಕರ ಭದ್ರತೆ ಕುರಿತು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ಕಾರ್ಖಾನೆಗಳು ಕಾರ್ಮಿಕರನ್ನು ಹೊರಗಟ್ಟಲು ಈ ಪ್ರಸ್ತಾವನೆಗಳು ನೆರವಾಗಲಿವೆ ಎಂಬ ಪ್ರಶ್ನೆಗೆ, ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಎದುರಾದರೆ ಉತ್ತಮ ಪರಿಹಾರ ಕೊಡಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com